ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2015ನೆ ಸಾಲಿನ ಗ್ರಾಮೀಣ ವರದಿಗಾರಿಕೆಗಾಗಿನ ಪದ್ಯಾಣ ಗೋಪಾಲಕೃಷ್ಣ (ಪ.ಗೋ) ಪ್ರಶಸ್ತಿಯನ್ನು ನಿರಂತರ ಪ್ರಗತಿ ಪತ್ರಿಕೆಯ ಉಪಸಂಪಾದಕ ಚಂದ್ರಹಾಸ ಚಾರ್ಮಾಡಿಗೆ ನಿನ್ನೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಪ್ರದಾನ ಮಾಡಲಾಯಿತು.
ದ.ಕ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಎಸ್.ಡಿ. ಪ್ರಶಸ್ತಿ ಪ್ರದಾನ ಮಾಡಿ, ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ಗುರುತಿಸಿಕೊಂಡಿ ರುವ ಮಾಧ್ಯಮ ತನ್ನ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ಯನ್ನು ತರಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಸಮಾಜಮುಖಿ ಹಾಗೂ ನಮ್ಮವರ ಜತೆಗಿನ ಸ್ಪಂದನದೊಂದಿಗೆ ಪತ್ರಕರ್ತರು ಕಾರ್ಯನಿರ್ವಹಿಸಬೇಕು ಎಂದು ಯುವ ಪತ್ರಕರ್ತರಿಗೆ ಕರೆ ನೀಡಿದರು.
ಪದ್ಯಾಣ ಗೋಪಾಲಕೃಷ್ಣರ ಜತೆಗಿನ ತಮ್ಮ ಒಡನಾಟವನ್ನು ವಿವರಿ ಸಿದ ಅವರು, ಪತ್ರಕರ್ತರು ತಮ್ಮಲ್ಲಿ ರುವ ದೌರ್ಬಲ್ಯವನ್ನು ಸಮಾಜಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು.

ಪ್ರಶಸ್ತಿ ಸ್ವೀಕರಿಸಿದ ಚಂದ್ರಹಾಸ ಚಾರ್ಮಾಡಿ ಮಾತನಾಡಿ, ಪ್ರಶಸ್ತಿ ಕೊಟ್ಟು ಬೆನ್ನು ತಟ್ಟಿದಾಗ ಪ್ರಶಸ್ತಿ ಪಡೆದಾತನ ಜವಾಬ್ಧಾರಿ ಹೆಚ್ಚುತ್ತದೆ. ಜತೆಗೆ ಇನ್ನಷ್ಟು ಉತ್ತಮ ಕೆಲಸಗಳಿಗೆ ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಿಸಿದರು. ಇದೇ ವೇಳೆ ಬೆಂಗಳೂರಿಗೆ ವರ್ಗಾವಣೆಗೊಂಡಿ ರುವ ಹಿರಿಯ ಪತ್ರಕರ್ತ ಸುರೇಶ ಬೆಳಗಜೆÉಯವರಿಗೆ ಆತ್ಮೀಯವಾಗಿ ಬೀಳ್ಕೂಡಲಾಯಿತು. ಮೈಸೂರಿನಲ್ಲಿ ನಡೆದ ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲಿ ್ಲ ಚಾಂಪಿಯನ್ ಶಿಪ್ ಪಡೆದಿರುವ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ತಂಡವನ್ನು ಅಭಿನಂದಿಸಲಾಯಿತು.
ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ಮಂಗಳೂರು ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಗುರುವಪ್ಪ ಬಾಳೆಪುಣಿ, ಪತ್ರಕರ್ತರ ಸಂಘದ ಖಜಾಂಚಿ ಇಬ್ರಾಹಿಂ ಅಡ್ಕಸ್ಥಳ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಪ್ರಶಸ್ತಿ ತೀರ್ಪುಗಾರ ಐ. ಬಿ. ಸಂದೀಪ್‍ಕುಮಾರ್ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ಪಿ.ಬಿ.ಹರಿಪ್ರಸಾದ್ ರೈ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.
