ಬಂಟ್ವಾಳ:ಪ್ರತೀ ಮನೆಯಲ್ಲಿ ಒಂದು ಗೋಮಾತೆಯನ್ನು ಸಾಕುವ ಮೂಲಕ ಆರ್ಥಿಕ ಸ್ವಾವಲಂಬನೆ ಮತ್ತು ಆರೋಗ್ಯದ ಜೊತೆಗೆ ಮಕ್ಕಳ ವಿದ್ಯಾರ್ಜನೆ ಮತ್ತು ಬುದ್ಧಿಮತ್ತೆ ವೃದ್ಧಿಸಲು ಕೂಡಾ ಪ್ರೇರಕ ಶಕ್ತಿಯಾಗುತ್ತದೆ
ಎಂದು ವೇದ ವಿದ್ವಾಂಸ ಕೆ.ಎಸ್.ನಿತ್ಯಾನಂದ ಚಿಕ್ಕಮಗಳೂರು ಇವರು ಹೇಳಿದ್ದಾರೆ. 
ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಗುರುವಾರ ರಾತ್ರಿ ಏರ್ಪಡಿಸಿದ್ದ ‘ಧರ್ಮ ಸಂಸತ್ತು’ ಯತಿಶ್ರೇಷ್ಠರ ಸಮಾಗಮ ಕಾರ್ಯಕ್ರಮದಲ್ಲಿ ಗೋಸಂಪತ್ತಿನ ಬಗ್ಗೆ ಅವರು ಮಾತನಾಡಿದರು.
ಶ್ರೀರಾಮ ಮಂದಿರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಸಂಸ್ಥಾನ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಸಾಧ್ವಿ ಮಾತಾನಂದಮಯಿ, ಮಂಗಳೂರು ಆದಿಚುಂಚನಗಿರಿ ಮಠದ ಧರ್ಮಪಾಲನಾಥ ಸ್ವಾಮೀಜಿ, ಉಪ್ಪಳ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಮಂಗಳೂರು ರಾಮಕರಷ್ಣ ಮಠದ ಜಿತಕಾಮಾನಂದ ಸ್ವಾಮೀಜಿ, ಕನ್ಯಾನ ಬಾಳೆಕೋಡಿ ಶಶಿಕಾಂತ ಮಣಿ ಸಾಮೀಜಿ, ಕಣಿಯೂರು ಮಹಾಬಲ ಸ್ವಾಮೀಜಿ, ಮೂಡುಬಿದ್ರೆ ಕರಿಂಜೆ ಮುಕ್ತಾನಂದ ಸ್ವಾಮೀಜಿ, ಪೊಳಲಿ ರಾಮಕೃಷ್ಣ ತಪೋವನ ವಿವೇಕ ಚೈತನ್ಯಾನಂದ ಸ್ವಾಮೀಜಿ, ಹೊಸ್ಮಾರು ಬಲ್ಯೊಟ್ಟು ವಿಖ್ಯಾತಾನಂದ ಸ್ವಾಮೀಜಿ, ಕಾರ್ಕಳ ಬೈಲೂರು ರಾಮಕೃಷ್ಣಾಶ್ರಮ ವಿನಾಯಕನಂದಾಜಿ ಮಹಾರಾಜ್ ಮತ್ತಿತರರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಧರ್ಮ ಬೋಧನೆ ಮತ್ತು ದಿಗ್ದರ್ಶನ ನೀಡಿದರು.
ಸಮಿತಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಕಾರ್ಯಾಧ್ಯಕ್ಷ ಜಿತೇಂದ್ರ ಎಸ್.ಕೊಟ್ಟಾರಿ, ವಿಶ್ವಸ್ಥ ಮಂಡಳಿ ಅಧ್ಯಕ್ಷ ಎ.ರುಕ್ಮಯಪೂಜಾರಿ, ಭಜನಾ ಮಂದಿರ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಕಾರ್ಯದರ್ಶಿ ಕ.ಕೃಷ್ಣಪ್ಪ ಮತ್ತಿತರರು ಇದ್ದರು. ಬಿ.ದೇವದಾಸ ಶೆಟ್ಟಿ ಮತ್ತು ರಾಜೇಶ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
