ಬಂಟ್ವಾಳ:ತಾಲ್ಲೂಕಿನ ನಾವೂರು ಗ್ರಾಮದ ಸುಲ್ತಾನ್ಕಟ್ಟೆ ಸಮೀಪದ ನೇತ್ರಾವತಿ ನದಿಯಲ್ಲಿ ವೃದ್ಧೆಯೊಬ್ಬರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಮೃತರನ್ನು ಸ್ಥಳೀಯ ಮಲೆಕೋಡಿ ನಿವಾಸಿ ಎವ್ಲಿನ್ ಪಾಯಸ್ (70) ಎಂದು ಗುರುತಿಸಲಾಗಿದೆ. ಇವರು ಕಳೆದ ಶುಕ್ರವಾರ ತನ್ನ ಪುತ್ರಿ ಮನೆಗೆ ಹೋಗುವುದಾಗಿ ತಿಳಿಸಿ ಹೋದವರು ಬಳಿಕ ಮರಳಿ ಮನೆಗೆ ಬಂದಿರಲಿಲ್ಲ. ಸೋಮವಾರ ಬೆಳಿಗ್ಗೆ ಇಲ್ಲಿನ ನೇತ್ರಾವತಿ ನದಿ ಬಳಿ ಇವರು ಬಳಸುತ್ತಿದ್ದ ವೀಳ್ಯದೆಲೆ ಚೀಲ ಮತ್ತು ಚಪ್ಪಲಿ ಗುರುತಿಸಿದ ಬಳಿಕ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹವು ಸ್ಥಳೀಯರ ಮೂಲಕ ಪತ್ತೆಯಾಗಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.
