ಬಂಟ್ವಾಳ:ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಗಾಯಗೊಂಡ ಘಟನೆ ಎ.13 ರಂದು ಬುಧವಾರ ಮಧ್ಯಾಹ್ನ ತಾಲೂಕಿನ ತುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಫರಂಗಿಪೇಟೆ ಸಮೀಪದ ಕುಂಜತ್ಕಲ ನಿವಾಸಿ ನಾಸಿರ್ ಗಾಯಗೊಂಡ ಬೈಕ್ ಸವಾರ. ಬಿ.ಸಿ.ರೋಡ್ನಿಂದ ಫರಂಗಿಪೇಟೆ ಕಡೆಗೆ ಸಂಚಾರಿಸುತ್ತಿದ್ದ ಬೈಕ್ಗೆ ಹಿಂಬದಿಯಿಂದ ಬಂದ ರಾಜಶ್ರೀ ಹೆಸರಿನ ಖಾಸಗಿ ಬಸ್ ಓವರ್ಟೇಕ್ ಮಾಡುವ ಭರದಲ್ಲಿ ಕೆಳಗಿನ ತುಂಬೆಯಲ್ಲಿ ಢಿಕ್ಕಿ ಹೊಡೆದಿದೆ. ಘಟನೆಯಿಂದ ಬೈಕ್ ಸವಾರನ ಕಾಲು, ಕೈಗೆ ತೀವ್ರ ಸರೂಪದ ಗಾಯಗಳಾಗಿವೆ. ರಸ್ತೆಯಲ್ಲಿ ಒದ್ದಾಡುತ್ತಿದ್ದ ಗಾಯಾಲು ಬೈಕ್ ಸವಾರನನ್ನು ಇತರ ವಾಹನಗಳ ಸವಾರರು ತುಂಬೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತರಾಟೆಗೆ: ಬಸ್ ಢಿಕ್ಕಿಯಿಂದ ತೀವ್ರ ಸ್ವರೂಪದ ಗಾಯಗೊಂಡ ಬೈಕ್ ಸವಾರನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸದೆ ಸುಮ್ಮನಿದ್ದ ಬಸ್ ಚಾಲಕ ಹಾಗೂ ನಿರ್ವಾಹಕನನ್ನು ಸ್ಥಳದಲ್ಲಿ ಸೇರಿದ ಸಾರ್ವಜನಿಕರು ತೀತ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಗಾಯಗೊಂಡು ರಸ್ತೆಯಲ್ಲಿ ಒದ್ದಾಡುತ್ತಿದ್ದ ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸುವ ಬದಲು ಬಸ್ ಚಾಲಕ ಮತ್ತು ನಿವರ್ಾಹಕ 108 ಆಂಬ್ಯುಲೆನ್ಸ್ಗೆ ಕರೆ ಮಾಡುವುದರಲ್ಲೇ ಬಾಕಿಯಾಗಿದ್ದರು ಎಂದು ಆರೋಪಿಸಿದ ಸಾರ್ವಜನಿಕರು ಖಾಸಗಿ ಹಾಗೂ ಸರಕಾರಿ ಬಸ್ಗಳ ವೇಗಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

By suddi9

Leave a Reply

Your email address will not be published. Required fields are marked *