ಬಂಟ್ವಾಳ: ತಾಲ್ಲೂಕಿನ ಕುಕ್ಕಿಪಾಡಿ ಸಮೀಪದ ಎಲಿಯನಡುಗೋಡು ಗ್ರಾಮದ ಬಾರ್ದೈಲ್ ಎಂಬಲ್ಲಿ ಕಳೆದ ಕೆಲವು ದಿನಗಳ ಹಿಂದೆ ಮುಂಬೈಗೆ ತೆರಳಿದ್ದ ವ್ಯಕ್ತಿಯೊಬ್ಬರು ಮನೆ ಸಮೀಪದ ಗುಡ್ಡವೊಂದರಲ್ಲಿ ಕೊಳೆತು ಶವವಾಗಿ ಸೋಮವಾರ ಪತ್ತೆಯಾಗಿದ್ದಾರೆ. ಮೃತರನ್ನು ಇಲ್ಲಿನ ನಿವಾಸಿ ದಿವಂಗತ ಬಾಬು ಶೆಟ್ಟಿ ಅವರ ಪುತ್ರ ಸತೀಶ್ ಶೆಟ್ಟಿ(42) ಎಂದು ಗುರುತಿಸಲಾಗಿದೆ. ಇವರು ಮನೆ ಸಮೀಪದ ಗುಡ್ಡದಲ್ಲಿ ಮೃತದೇಹವು ಸಂಪೂರ್ಣ ಕೊಳೆತು ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ಬೆಳಿಗ್ಗೆ ಸ್ಥಳೀಯರೊಬ್ಬರು ಗುಡ್ಡಕ್ಕೆ ಹೋಗಿದ್ದ ವೇಳೆ ಈ ಮೃತದೇಹ ಕಂಡು ಬಂದಿದ್ದು, ತಕ್ಷಣವೇ ಅವರು ಸ್ಥಳೀಯರಿಗೆ ಮಾಹಿತಿ ನೀಡಿದ ಬಳಿಕ ಘಟನಾ ಸ್ಥಳದಲ್ಲಿ ದೊರೆತ ಪ್ಯಾಂಟ್ ಮತ್ತು ಬೂಟು ಗುರುತಿಸಿ ಮೃತರು ಸತೀಶ್ ಶೆಟ್ಟಿ ಎಂಬುದು ಖಚಿತಪಡಿಸಿಕೊಂಡು.
ಸತೀಶ್ ಶೆಟ್ಟಿ ಅವರು ಕಳೆದ ಕೆಲವು ವರ್ಷಗಳಿಂದ ಅಂಗಡಿ ವ್ಯವಹಾರ ನಡೆಸುತ್ತಾ ಮುಂಬನಲ್ಲೇ ನೆಲೆಸಿದ್ದು, ಈಚೆಗಷ್ಟೇ ಇಲ್ಲಿನ ಪೂಂಜ ಜಾತ್ರೆಗೆಂದು ಆಗಮಿಸಿದ್ದರು ಎನ್ನಲಾಗಿದೆ. ಆ ಬಳಿಕ ಮಾ.30ರಂದು ಮತ್ತೆ ಮುಂಬಗೆ ತೆರಳಿದ್ದ ಅವರು ಅಲ್ಲಿಗೆ ತಲುಪಿಲ್ಲ. ಈ ಬಗ್ಗೆ ಅವರ ಪತ್ನಿ ಮಹಾರಾಷ್ಟ್ರದÀ ಥಾಣಾ ಜಿಲ್ಲೆ ಕನ್ನಕ್ಯ ಪೆÇಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಸತೀಶ ಶೆಟ್ಟಿ ಅವರು     ಮುಂಬೈಗೆಹೋಗದೆ ಯಾವುದೋ ವಿಷ ಪದಾರ್ಥ ಸೇವಿಸಿ ಮನೆ ಸಮೀಪದ ಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪುಂಜಾಲಕಟ್ಟೆ ಠಾಣೆ ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *