ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟುವಿನ ಕೊಡಂಬೆಟ್ಟು ಎಂಬಲ್ಲಿ ವಿವಾಹ ನಿಶ್ಚಿತಾರ್ಥಗೊಂಡ ಯುವತಿಯೊಬ್ಬರು ದಿಢೀರ್ ನಾಪತ್ತೆಯಾದ ಘಟನೆ ಇಲ್ಲಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿನ ನಿವಾಸಿ ಚಂದ್ರಶೇಖರ ಶೆಟ್ಟಿ ಎಂಬವರ ಪುತ್ರಿ ದೀಕ್ಷಿತಾ ಎಂಬಾಕೆಗೆ ವಿವಾಹ ನಿಶ್ಚಿತಾರ್ಥಗೊಂಡು ಆಮಂತ್ರಣ ಪತ್ರವೂ ಸಿದ್ಧಗೊಳಿಸಲಾಗಿತ್ತು. ಇದಕ್ಕಾಗಿ ಶುಕ್ರವಾರ ಬೆಳಿಗ್ಗೆ ಸ್ಥಳೀಯ ಪದವು ದೇವಸ್ಥಾನದಲ್ಲಿ ಆಮಂತ್ರಣಪತ್ರವನ್ನು ಪೂಜೆಗೆ ಇಡಲು ತನ್ನ ಸಹೋದರ ತಿಲಕನೊಂದಿಗೆ ತೆರಳಿದ್ದ ಯುವತಿ ಬಳಿಕ ವಾಮದಪದವು ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಬಳಿಕ ನಾಪತ್ತೆಯಾಗಿರುವ ಬಗ್ಗೆ ಶನಿವಾರ ಸಲ್ಲಿಸಿದ ದೂರಿನಲ್ಲಿ ವಿವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *