ಬಂಟ್ವಾಳ: ಶ್ರೀ ರವಿಶಂಕರ ಗುರೂಜಿಯವರಿಂದ ಸ್ಥಾಪಿತವಾದ ಅಂತಾರಾಷ್ಟ್ರೀಯ ಸಂಸ್ಥೆ ಆರ್ಟ್ ಆಫ್ ಲಿವಿಂಗ್ನ ಅಂಗಸಂಸ್ಥೆ ವ್ಯಕ್ತಿ ವಿಕಾಸ ಕೇಂದ್ರ ಬಂಟ್ವಾಳ ಶಾಖೆಯ ವತಿಯಿಂದ ಮಹಾ ಸತ್ಸಂಗ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ರಾಯಿ,ದೈಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.6ರಂದು ಜರಗಿತು. 
ವ್ಯಕ್ತಿ ವಿಕಾಸ ಕೇಂದ್ರದ ಸ್ವಾಮಿ ಸೂರ್ಯಪಾದ (ಛಾಯಣ್ಣ) ಅವರು ಕಾರ್ಯಕ್ರಮ ಉದ್ಘಾಟಿಸಿ ಸತ್ಸಂಗ ಗಾನ ನಡೆಸಿ ಮಾತನಾಡಿ ಮಾನಸಿಕ ಒತ್ತಡ, ದೈನಂದಿನ ಜಂಜಾಟಗಳನ್ನು ದೂರಗೊಳಿಸಲು ಮಹಾ ಸತ್ಸಂಗ ಪೂರಕವಾಗಿದೆ. ಉತ್ತಮ ಆರೋಗ್ಯ ಮತ್ತು ಸಂತೃಪ್ತ ಭಾವನೆಯಿಂದ ಕಾರ್ಯದಕ್ಷತೆ ಹೆಚ್ಚಿ ಆತ್ಮವಿಶ್ವಾಸ ವೃದ್ಧಿಯಾಗುವುದು ಎಂದು ಹೇಳಿದರು.
ದೇವಸ್ಥಾನದ ನಿಕಟಪೂರ್ವ ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಭಟ್ ಮಾದೇರಿ, ಪ್ರಧಾನ ಅರ್ಚಕ ಹರೀಶ್ ಭಟ್ ದೈಲ, ರಾಮಚಂದ್ರ ಭಟ್, ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ, ಹರೀಶ್ ಆಚಾರ್ಯ, ರಾಘವ ಅಮೀನ್, ಹರಿಪ್ರಸಾದ್ ರಾವ್, ಹೇಮಾ ಎಚ್.ರಾವ್ , ವ್ಯಕ್ತಿ ವಿಕಾಸ ಕೇಂದ್ರ ಬಂಟ್ವಾಳ ಶಾಖೆಯ ಡಾ| ಕೆ.ವಿ.ಶೆಣೈ, ರಾಧಾ ಶೆಣೈ, ಸುನಿಲ್, ಅನಿತ ಮುರಳಿಕೃಷ್ಣ, ರಾಜರಾಮ ಐತಾಳ್, ಸದಾಶಿವ ಕಾಮತ್, ಸುರೇಖಾ ಜೈನ್, ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ವಸಂತ ಕುಮಾರ್ ಪಡೀಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಕೆ. ವಂದಿಸಿದರು.
