ಬಂಟ್ವಾಳ : ತಾಲೂಕು ಪಿಲಾತಬೆಟ್ಟು ಗ್ರಾಮದ ನಯನಾಡು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್ ನೂತನ ಚರ್ಚ್ ನಿವಾಸದ ಉದ್ಘಾಟನಾ ಕಾರ್ಯಕ್ರಮ ಎ.6ರಂದು ಜರಗಿತು.ಮಂಗಳೂರು ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡಾ|ಅಲೋಶಿಯಸ್ ಪಾವ್ಲ್ ಡಿಸೋಜ ಅವರು ದಿವ್ಯ ಬಲಿಪೂಜೆ ನೆರವೇರಿಸಿ ನೂತನ ಚರ್ಚ್ ನಿವಾಸವನ್ನು ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕ್ರೈಸ್ತ ಸಮಾಜದ ಅಭಿವೃದ್ಧಿ ಜೊತೆಗೆ ಶಿಕ್ಷಣ ಮೊದಲಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಯನಾಡು ಚಚರ್್ನ ಧರ್ಮಗುರು ಹಾಗೂ ಸಮಾಜ ಬಾಂಧವರು ಅಭಿನಂದನೀಯರು. ಆರಾಧನಾ ಕೇಂದ್ರಗಳು ಸುಸ್ಥಿತಿಯಲ್ಲಿದ್ದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಬೆಳ್ತಂಗಡಿ ಚರ್ಚ್ ವಲಯದ ಮುಖ್ಯಸ್ಥ ಫಾ| ಬೊನೊವೆಂಚರ್ ನಝರತ್, ರೊಜಾರಿಯೋ ಕಾಲೇಜು ಪ್ರಾಂಶುಪಾಲ ಫಾ| ವಿನ್ಸೆಂಟ್ ಡಿಸೋಜ, ಸಿ| ಮೋಂತಿ ಡಿಸೋಜ ಅವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚರ್ಚ್ ಧರ್ಮಗುರು ಫಾ| ಫ್ರೆಡ್ರಿಕ್ ಮೊಂತೇರೊ ಹಾಗೂ ಚರ್ಚ್ ನಿವಾಸದ ನಿರ್ಮಾಣಕ್ಕೆ ಸಹಕರಿಸಿದ ಗಣ್ಯರನ್ನು ಸಮ್ಮಾನಿಸಲಾಯಿತು. ಚರ್ಚ್ ಪಾಲನಾ ಮಂಡಳಿ ಅಧ್ಯಕ್ಷ ಲಾರೆನ್ಸ್ ಡಿಸೋಜ, ಉಪಾಧ್ಯಕ್ಷೆ ಫ್ಲೋರಿನ್ ಡಿಸೋಜ, ಕಾರ್ಯದರ್ಶಿ ಅಶೋಕ್ ಡಿಸೋಜ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಉಪನ್ಯಾಸಕ ಅವಿಲ್ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು.
