ತುಳುನಾಡಿನಲ್ಲಿ ಪ್ರಕೃತಿ ಆರಾಧನೆಗೆ ಪೂರಕವಾಗಿ ಕಣ್ಣಿಗೆ ಕಾಣುವ ನಾಗ ದೇವರು ಎಲ್ಲರಿಂದಲೂ ಪೂಜಿಸಲ್ಪಡುವ ಮೂಲಕ ವಿವಿಧ ಜಾತಿ ಮತ್ತು ಧಾಮರ್ಿಕ ಚೌಕಟ್ಟನ್ನು ಮೀರಿ ನಿಂತಿದೆ. ಮಾತ್ರವಲ್ಲದೆ ಯಾವುದೇ ಪುಣ್ಯಕ್ಷೇತ್ರಗಳ ಜೀಣರ್ೋದ್ಧಾರ, ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವ ಮತ್ತಿತರ ಧಾಮರ್ಿಕ ಮಹತ್ಕಾರ್ಯ ನೆರವೇರಿಸಲು ಸೂಕ್ತ ವ್ಯಕ್ತಿಯೊಬ್ಬರಿಗೆ ನೇತೃತ್ವ ವಹಿಸಲು ಭಗವಂತನೇ ಪ್ರೇರಣೆ ನೀಡುತ್ತಾನೆ ಎಂದು ಸುಬ್ರಹ್ಮಣ್ಯ ಸಂಸ್ಥಾನ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.


ಕಲ್ಲಡ್ಕ ಸಮೀಪದ ನಿಟಿಲಾಪುರ ಪುರಾಣ ಪ್ರಸಿದ್ಧ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ಬಳಿ ಲೋಕ ಕಲ್ಯಾಣಾರ್ಥವಾಗಿ ಶುಕ್ರವಾರ ರಾತ್ರಿ ನಡೆದ ಅಷ್ಟಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ನಾಗನ ಆರಾಧನೆಯಿಂದ ಮಾನಸಿಕ ನೆಮ್ಮದಿ ಜೊತೆಗೆ ದೈಹಿಕ ವಿವಿಧ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆಯಿಂದ ನಾಗಾರಾಧನೆಗೆ ಭಕ್ತರು ತುಳುನಾಡಿನ ಪುಣ್ಯಕ್ಷೇತ್ರಗಳಿಗೆ ಧಾವಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ನಾಗಮಂಡಲೋತ್ಸವ ಸಮಿತಿ ಗೌರವಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿನ ದೇವಾಲಯ ಪುನರ್ನವೀಕರಣ ಕಾರ್ಯದಲ್ಲಿ ಭಕ್ತರು ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳುವಂತೆ ವಿನಂತಿಸಿಕೊಂಡರು.
ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ನಿಟಿಲಾಕ್ಷ ದೇವಾಲಯ ಜೀಣರ್ೋದ್ಧಾರ ಕಾರ್ಯ ತ್ವರಿತವಾಗಿ ನಡೆಯಲು ಇಲ್ಲಿನ ಜೀಣರ್ೋದ್ಧಾರ ಸಮಿತಿ ನೇತೃತ್ವ ಯಶಸ್ವಿಯಾಗುತ್ತಿದೆ ಎಂದರು.
ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಅವಿಭಜಿತ ಜಿಲ್ಲೆಯ ವಿವಿಧೆಡೆ ನಾಗಮಂಡಲ ಉತ್ಸವಾದಿ ಸೇವೆ ನಿರಂತರವಾಗಿ ನಡೆಯುವ ಮೂಲಕ ಭಕ್ತರ ಅಭೀಷ್ಟ ಈಡೇರುತ್ತಿದೆ ಎಂದರು.
ಯುವಜನ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಇಲ್ಲಿನ ಮೊಗರ್ನಾಡು ಸಾವಿರ ಸೀಮೆ ಮತ್ತು ನಮಗೆ ಹಿರಿಯರ ಕಾಲದಿಂದಲೂ ವಿಶೇಷ ನಂಟು ಹೊಂದಿದೆ ಎಂದರು.
ಶಾಸಕಿ ಟಿ.ಶಕುಂತಳಾ ಶೆಟ್ಟಿ, ಅಡ್ಯಾರು ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಕೆ.ಮಂಜುನಾಥ ಭಂಡಾರಿ, ಕೇಂದ್ರ ಕಾರ್ಮಿಕ ಕಲ್ಯಾಣ ನಿಗಮ ಮಾಜಿ ಅಧ್ಯಕ್ಷ ರಾಮಿ ರೆಡ್ಡಿ ಬೆಂಗಳೂರು, ಹೈಕೋಟರ್ು ವಕೀಲ ಜಗನ್ನಾಥ ಆಳ್ವ ಮಿತ್ತಳಿಕೆ, ಉದ್ಯಮಿಗಳಾದ ಅಶೋಕ್ ಕುಮಾರ್ ಕರಿಕಳ, ಡಾ.ಹರ್ಷ ಕುಮಾರ್ ರೈ ಮಾಡಾವು, ಗಣೇಶ ರಾವ್ ಬರಿಮಾರು, ಮುಂಬೈ ಮಾತೃಭೂಮಿ ಬ್ಯಾಂಕಿನ ಅಧ್ಯಕ್ಷ ರತ್ನಾಕರ ಶೆಟ್ಟಿ, ಭಾರತೀಯ ರಿಸವರ್್ ಬ್ಯಾಂಕಿನ ಮಾಜಿ ನಿರ್ದೇಶಕ ನವೀನ ಭಂಡಾರಿ, ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಡಿ.ಆರ್.ರಾಜು, ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಮಮತಾ ಎಸ್.ಗಟ್ಟಿ, ಮಂಜುಳಾ ಮಾಧವ ಮಾವೆ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ ಜೈನ್, ಎ.ಸಿ.ಭಂಡಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸುನಿತಾ ನಾಯಕ್ ಮತ್ತಿತರರು ಶುಭ ಹಾರೈಸಿದರು.
ಸ್ವಾಗತ ಸಮಿತಿ ಸಂಚಾಲಕ ಕೆ.ಪದ್ಮನಾಭ ರೈ ಕಲ್ಲಡ್ಕ, ಆಥರ್ಿಕ ಸಮಿತಿ ಸಂಚಾಲಕ ಜಗನ್ನಾಥ ಚೌಟ ಬದಿಗುಡ್ಡೆ, ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು, ಪ್ರಧಾನ ಕಾರ್ಯದರ್ಶಿ ಗಣೇಶ ಶೆಟ್ಟಿ, ಗೋಳ್ತಮಜಲು, ಆಡಳಿತಾಧಿಕಾರಿ ಉಮೇಶ ಭಟ್, ಪ್ರಧಾನ ಅರ್ಚಕ ನಾರಾಯಣ ರಾವ್ ಕಾರಂತ್ ಮತ್ತಿತರರು ಇದ್ದರು.
ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಸ್ವಾಗತಿಸಿದರು. ಸಮಿತಿ ಕಾರ್ಯಾಧ್ಯಕ್ಷ ವಕೀಲ ಅಶೋಕ್ ಕುಮಾರ್ ಬರಿಮಾರು ಪ್ರಾಸ್ತಾವಿಕ ಮಾತನಾಡಿ, ಮೊಗರ್ನಾಡು ಸಾವಿರ ಸೀಮೆಗೆ ಸೇರಿದ ಈ ದೇವಾಲಯಕ್ಕೆ ಒಟ್ಟು 14 ಗ್ರಾಮಗಳು ಒಳಪಡುತ್ತಿದ್ದು, ಅಪಾರ ಮಂದಿ ಭಕ್ತರು ಸ್ವಯಂ ಸೇವಕರಾಗಿ ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು. ಸಮಿತಿ ಸದಸ್ಯ ಎಸ್.ಪಿ.ಶೆಟ್ಟಿ ವಂದಿಸಿದರು. ಬಾಲಕರಷ್ನ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.


