ಕನ್ನಡ ಸಾಹಿತ್ಯ ಪರಿಷತ್ತು ಮತ್ತುಕಲ್ಕೂರ ಪ್ರತಿಷ್ಠಾನ ವತಿಯಿಂದಯಕ್ಷಗಾನಕಲಾವಿದ, ಹಾಸ್ಯರತ್ನ ಮಿಜಾರುಅಣ್ಣಪ್ಪಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಶಾರದಾ ವಿದ್ಯಾಲಯದಧ್ಯಾನ ಮಂದಿರದಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಮೇಯರ್ ಹರಿನಾಥ್, ನಗಿಸಿ ಹಾಸ್ಯ ಪ್ರಪಂಚದ ಮೂಲಕ ಪುರಾಣದಜ್ಞಾನವನ್ನುಜನರಿಗೆ ತಿಳಿಸಿದ ಮಹಾನ್‍ಕಲಾವಿದ ಮಿಜಾರುಅಣ್ಣಪ್ಪಅವರು ನಮ್ಮನ್ನುಅಗಲಿರುವುದು ತುಂಬಲಾರದ ನಷ್ಟ ಎಂದರು.

ಕಲಾವಿದ ಪ್ರಭಾಕರ ಜೋಶಿ ಮಾತನಾಡಿ, ಅಸಾಧಾರಣ ವ್ಯಕ್ತಿತ್ವದಅಣ್ಣಪ್ಪಅವರ ನಟನೆ ನಟನೆಯಂತಿರದೆ ಸ್ವಾಭಾವಿಕವಾಗಿತ್ತು. ತುಳುನಾಡಿನ ಕ್ರಮಆಚಾರ ವಿಚಾರಗಳನ್ನು ತಮ್ಮ ಹಾಸ್ಯದ ಮೂಲಕ ತಂದರೀತಿಅದ್ಭುತಎಂದರು.

mijaru annappa (1) (1)

ಕಲ್ಕೂರ ಪ್ರತಿಷ್ಠಾನದಅಧ್ಯಕ್ಷ ಪ್ರದೀಪ್‍ಕುಮಾರ್‍ಕಲ್ಕೂರ ಮಾತನಾಡಿ, ಮನೆ ಭಾಷೆಕೊಂಕಣಿಯಾಗಿದ್ದರೂ ತುಳು ಹಾಗೂ ಕನ್ನಡದಲ್ಲಿ ಹೆಚ್ಚಿನ ಪ್ರಬುದ್ಧತೆ ಹೊಂದಿದ್ದ ಮಿಜಾರುಅಣ್ಣಪ್ಪಅವರು ವಿಶ್ವದ್ಯಂತ ಅಭಿಮಾನಿಗಳನ್ನು ಹೊಂದಿದ್ದರುಎಂದರು.

ಮಾಜಿ ಮೇಯರ್ ಶಶಿಧರ್ ಹೆಗ್ಡೆ,ಶರವುರಾಘವೇಂದ್ರ ಶಾಸ್ತ್ರಿ, ಕಲಾವಿದರಾದ ಕೋಳ್ಯೂರು ರಾಮಚಂದ್ರರಾವ್, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಶರತ್‍ಕುಮಾರ್‍ಕದ್ರಿ, ನಂದಳಿಕೆ ಬಾಲಚಂದ್ರರಾವ್, ಡಾ. ಲೀಲಾ ಉಪಾಧ್ಯಾಯ, ಕೆ.ಎಸ್. ಕಲ್ಲೂರಾಯ ಮೊದಲಾದವರು ಉಪಸ್ಥಿತರಿದ್ದರು. ಮಂಜುಳಾ ಶೆಟ್ಟಿ, ದಯಾನಂದಕಟೀಲು ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *