ಪಡುಬಿದ್ರಿ : ರಾ.ಹೆ. 66ರ ಮೂಳೂರು ಸಂಘದ ಬಳಿ ಮೀನು ಹೇರಿಕೊಂಡು ಸಾಗುತ್ತಿದ್ದ ಟಾಟಾ ಮೊಬೈಲ್ ಟೆಂಪೋವೊಂದು ವಾಕಿಂಗ್ ನಿರತ ಪಾದಾಚಾರಿಯೋರ್ವರಿಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಮೂಳೂರು ಮೇಲ್ಮನೆ ಹೌಸ್ ನಿವಾಸಿ ನಾರಾಯಣ ಪೂಜಾರಿ (65.) ಎಂಬವರೇ ಗಾಯಗೊಂಡ ಗಾಯಾಳುವಾಗಿದ್ದಾರೆ.
5 apr 004

5 apr 005ಎಂದಿನಂತೆ ನಾರಾಯಣ ಪೂಜಾರಿ ವಾಕಿಂಗ್ ನಿರತರಾಗಿದ್ದ ಸಂದರ್ಭ ಮಂಗಳವಾರ ಮುಂಜಾವಿನ 6:30ರ ಸುಮಾರಿಗೆ ವಾಪಾಸು ಮನೆ ಕಡೆಗೆ ಹೋಗುತ್ತಿರುವಾಗ ಮೀನು ಹೇರಿಕೊಂಡಿದ್ದ ಟೆಂಪೋ ಡಿಕ್ಕಿ ಹೊಡೆದು ಗಾಯಗೊಂಡಿರುತ್ತಾರೆ. ಟೆಂಪೋ ಪಕ್ಕದ ಚರಂಡಿಯತ್ತ ಮಗುಚಿ ಅಡ್ಡಲಾಗಿ ಬಿದ್ದಿದ್ದು, ಮೀನು ಚೆಲ್ಲಾಪಿಲ್ಲಿಗೊಂಡಿದ್ದು, ಚಾಲಕ ಅಪಾಯದಿಂದ ಪಾರಾಗಿರುತ್ತಾನೆ. ಈ ಬಗ್ಗೆ ಕಾಪು ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

By suddi9

Leave a Reply

Your email address will not be published. Required fields are marked *