ಜೀರ್ಣೋದ್ಧಾರಗೊಳ್ಳುತ್ತಿರುವ ವಿಟ್ಲ, ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶ್ರೀ ಗಣಪತಿ ದೇವರ ಸಹಿತ ಶ್ರೀ ಉಮಾಮಹೇಶ್ವರ ದೇವರ ಬಾಲಾಲಯ ಪ್ರತಿಷ್ಠೆ, ಪ್ರತಿಷ್ಠಾಕಲಶಾಭೀಷೇಕ, ಧ್ಯಾನ ಸಂಕೋಚ ಕ್ರೀಯೆಗಳು, ನಿಧಿ ಸಂಚಯನ, ಧಾರ್ಮಿಕ ಸಭೆ ಹಾಗೂ ಇತರ ಕಾರ್ಯಕ್ರಮಗಳು ಎ.3ರಂದು ಭಾನುವಾರ ರಂದು ನಡೆಯಿತು. ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಬಿ ರಮಾನಾಥ ರೈ ಭಾಗವಹಿಸಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಿಟ್ಲ ಅರಮನೆ ಅರಸರಾದ ಜನಾರ್ಧನ ವರ್ಮ ಅರಸರು ವಹಿಸಿದ್ದರು.


ಶ್ರೀಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಯೋಗಿ ಕೌಸ್ತುಭ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಅತಿಥಿಗಳಾಗಿ ಜಿಲ್ಲಾ ನಿವೃತ್ತ ನ್ಯಾದೀಶ ಪದ್ಮನಾಭ ಕೆದಿಲಾಯ, ಕೆಮ್ಮಲೆ ಮೆನಾಲಗುತ್ತು ಜಲಧರ ಶೆಟ್ಟಿ, ಮೈಸೂರು ನಿವೃತ್ತ ಕೈಗಾರಿಕೋದ್ಯಮಿ ಮೋಹನ ರಾವ್, ಚಂದ್ರಪ್ರಕಾಶ್ ಶೆಟ್ಟಿ ಮತ್ತು ಉಪ್ಪಿನಂಗಡಿ ಬಿಳಿಯೂರುಗುತ್ತು ಧನ್ಯ ಕುಮಾರ್ ರೈ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಲಧರ ಶೆಟ್ಟಿ ಕೆಮ್ಮಲೆಯವರು ತಮ್ಮ ಧೇನಿಗೆಯ ಪ್ರಥಮ ಕಂತು ಎರಡು ಲಕ್ಷರೂಪಾಯಿಯನ್ನು ಮತ್ತು ಪದ್ಮನಾಭ ಕೆದಿಲಾಯರು ಮೂರು ಲಕ್ಷ ರೂಪಾಯಿಯನ್ನು ಜೀರ್ಣೋದ್ಧಾರ ಸಮಿತಿಗೆ ನೀಡಿದರು. ಸದಾಶಿವ ಆಚಾರ್ಯ ಸ್ವಾಗತಿಸಿದರು. ದಿನೇಶ್ ಮಾಮೇಶ್ವರ ಪ್ರಸ್ತಾವಿಸಿ ವಂದಿಸಿದರು. ಶಿಕ್ಷಕ ವಿಠಲ್ ನಾಯಕ್ ಮತ್ತು ಹರೀಶ್ ಕೆ ಕಾರ್ಯಕ್ರಮ ನಿರೂಪಿಸಿದರು. ಪುರಂದರ ಇಂದ್ರಪಡ್ಪು ಸಹಕರಿಸಿದರು

