ವಿಟ್ಲ: ಚಂದಳಿಕೆ ಸಹಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಧ್ವನಿವರ್ಧಕವನ್ನು ವಿಟ್ಲ ಜೇಸಿಐ ವತಿಯಿಂದ ಉಚಿತವಾಗಿ ನೀಡಲಾಯಿತು. ಈ ಕಾರ್ಯಕ್ರಮವನ್ನು ಶ್ರೀಧರ ಶೆಟ್ಟಿ ಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ಬಾಬು ಕೆ ವಿ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಮುಖ್ಯ ಶಿಕ್ಷಕಿ ಪುಷ್ಪಾ, ಸಿ ಆರ್ ಪಿ ಶಿವರಾಮ ಭಟ್, ವಿದ್ಯಾ ವರ್ದಕ ಸಂಘದ ಅಧ್ಯಕ್ಷೆ ಭವಾನಿ ರೈ, ಜತೆ ಕಾರ್ಯದರ್ಶಿ ದೇಜಪ್ಪ ಪೂಜಾರಿ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ, ಜೇಸಿಐ ಸದಸ್ಯರುಗಳಾದ ಭಾಸ್ಕರ ಶೆಟ್ಟಿ, ವಿಜಯ್ ಪಾಯಿಸ್, ಅಣ್ಣಪ್ಪ ಸಾಸ್ತಾನ ಸಂಜೀವ ಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.
