ಬಜ್ಪೆ: ಎಚ್ ಪಿ ಸಿ ಎಲ್ ಕಂಪೆನಿ ಅಧಿಕಾರಿಯೋರ್ವರು ಪೈಪ್ಲೈನ್ ಕಾಮಗಾರಿ ತಡೆಯಲು ಬಂದ ವ್ಯಕ್ತಿ ಮೈಗೆ ಕೈ ಹಾಕಿ ಜಾತಿನಿಂದನೆ ಗೈದಿದ್ದಾರೆಂದು ಆರೋಪಿಸಿದ ಘಟನೆ ಕಿನ್ನಿಕಂಬ್ಳ ಗುರಿಕುಮೇರು ಎಂಬಲ್ಲಿ ನಡೆದಿದೆ. ಎಚ್ ಪಿ ಸಿಎಲ್ ಕಂಪೆನಿಯ ಅಧಿಕಾರಿ ನಿತೀಶ್ ಕುಮಾರ್ ಪ್ರಕರಣದ ಆರೋಪಿ.
ನಿತೀಶ್ ಕುಮಾರ್ ಅವರು ಪೈಪ್ ಕಾಮಗಾರಿ ನಡೆಸಲೆಂದು ಕಿನಿಕಂಬಳ ಗುರಿಕುಮೇರು ನಿವಾಸಿ ಉಮೇಶ್ ರಾಣ್ಯ ಎಂಬವರ ಜಾಗಕ್ಕೆ ಬಂದಿದ್ದರು. ಆಗ ಉಮೇಶ್ ರಾಣ್ಯ ತಮಗೆ ಸಿಗಬೇಕಾದ ಪರಿಹಾರ ಕೊಡದೆ ಕಾಮಗಾರಿ ನಡೆಸಬೇಡಿ ಎಂದು ತಾಕೀತು ಮಾಡಿದರು. ಆಗ ಅಧಿಕಾರಿಯವರು ರಾಣ್ಯ ಅವರ ಜಾತಿನಿಂದನೆಗೈದು, ಅವಾಚ್ಯವಾಗಿ ನಿಂದಿಸಿ ಕತ್ತು ಪಟ್ಟಿ ಹಿಡಿದು ಕೈಯ್ಯಿಂದ ದೂಡಿ ಹಾಕಿದ್ದಲ್ಲದೆ ನನಗೆ ಕೆಲಸ ಮಾಡಲು ಬಿಡು ಎಂದು ಅವರನ್ನು ಬಲವಂತವಾಗಿ ಸರಿಸಿದ್ದಾಗಿ ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.
