ಬಂಟ್ವಾಳ : ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯತ್ , ಬಂಟ್ವಾಳ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳು , ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಬಿ.ಸಿ.ರೋಡ್ ಸಭಾಂಗಣದಲ್ಲಿ ಜರಗಿದ ಕಾನೂನು ಸಾಕ್ಷರತಾ ರಥ , ಸಂಚಾರಿ ನ್ಯಾಯಾಲಯದ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಸಂಚಾರಿ ಠಾಣಾ ಉಪನಿರೀಕ್ಷಕರಾದ ಚಂದ್ರಶೇಖರಯ್ಯರವರನ್ನು ಹಿರಿಯ ಸಿವಿಲ್ ನ್ಯಾಯಾ ಧೀ ಶರಾದ ಚಂದ್ರಶೇಖರ ಯು. ಸನ್ಮಾನಿಸಿದರು.
ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ಲಯನ್ಸ್ ಅಧ್ಯಕ್ಷ ಜಯಂತ್ ಶೆಟ್ಟಿ, ಲಯನ್ ವಸಂತ್ ಬಾಳಿಗಾ, ನ್ಯಾಯವಾದಿ ಅಶ್ವನಿ ಕುಮಾರ್ ರೈ , ಲಯನೆಸ್ ಅಧ್ಯಕ್ಷೆ ಗೀತಾ ಜೆ.ಶೆಟ್ಟಿ, ಲಯನ್ ಸದಸ್ಯರಾದ ದಾಮೋದರ್ ಬಿ.ಎಂ. , ಸತ್ಯನಾರಾಯಣ ರಾವ್, ಸಂದೀಪ್ ಉಪಸ್ಥಿತರಿದ್ದರು.
