ವಿಟ್ಲ : ಕರ್ನಾಟಕ ಟೈಲರ್ಸ್ ಎಸೋಸಿಯೇಶಲ್ ವಿಟ್ಲ ವಲಯದ 17 ನೇ ವಾರ್ಷಿಕ ಮಹಾಸಭೆಯು ಕೆ ಎಸ್ ಟಿ ಎ ವಿಟ್ಲ ವಲಯದ ಕಚೇರಿಯ ಹೊರಾಂಗಣದಲ್ಲಿ ವಲಯ ಅಧ್ಯಕ್ಷ ಡಾನ್ ಟೈಲರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಕೆ ಎಸ್ ಟಿ ಎ ಜಿಲ್ಲಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ರಮೇಶ್ ಮೂಡೂರು, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಸಾಲಿಯಾನ್, ಬಿ ಸಿ ರೋಡ್ ವಲಯ ಅಧ್ಯಕ್ಷ ಸತೀಶ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಟೈಲರ್ಗಳಾದ ಕೆ ಆನಂದ ಟೈಲರ್ ಸಾಲೆತ್ತೂರು ಮತ್ತು ಟೈಲರ್ ಬಾಬುಶಂಕರ್ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಟ್ಲ ವಲಯದ 2016-17 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಆರ್ ಎನ್ ಟೈಲರ್, ಕಾರ್ಯದರ್ಶಿಯಾಗಿ ಸಿ ರುಕುಮ ಚಂದಳಿಕೆ, ಉಪಾಧ್ಯಕ್ಷರಾಗಿ ಸುಂದರ ಆದರ್ಶ ಟೈಲರ್, ಮಹಿಳಾ ಉಪಾಧ್ಯಕ್ಷೆಯಾಗಿ ಶಾಂತಲ, ಜೊತೆಕಾರ್ಯದರ್ಶಿಯಾಗಿ ದಿವಾಕರ ಟೈಲರ್, ಮಹಿಳಾ ಕಾರ್ಯದರ್ಶಿ ಯಾಗಿ ಭಾರತಿ, ಕೋಶಾಧಿಕಾರಿಯಾಗಿ ಜತ್ತಪ್ಪ ಟೈಲರ್ ಚಂದಳಿಕೆ ಹಾಗೂ 9 ಜನರನ್ನು ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಅಧಯಕ್ಷ ಡಾನ್ ಟೈಲರ್ ಸ್ವಾಗತಿಸಿದರು. ಕಾರ್ಯದರ್ಶಿ ರುಕುಮ ವಂದಿಸಿದರು. ಆರ್ ಕೆ ಕನ್ಯಾನ ಕಾರ್ಯಕ್ರಮ ನಿರೂಪಿಸಿದರು
