ಬಂಟ್ವಾಳ : ವಿಟ್ಲ ನಾಡ ಕಛೇರಿಯಲ್ಲಿ ಉಪತಹಶೀಲ್ದಾರರಾಗಿ ಮತ್ತು ಪಾಣೆ ಮಂಗಳೂರು ನಾಡಕಛೇರಿಯಲ್ಲಿ ಪ್ರಭಾರ ಉಪತಹಶೀಲ್ದಾರ್ ಆಗಿ ಸುದೀರ್ಘ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಕೆ.ವಾಮನ ರವರನ್ನು ತಹಶೀಲ್ದಾರ್ ಪುರಂಧರ ಹೆಗಡೆ ಸನ್ಮಾನಿಸಿದರು. 
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ರಾದ ಪರಮೇಶ್ವರ ನಾಯಕ್ , ಪರಮೇಶ್ವರ ಮೊಯಿಲಿ, ಜೆ.ಪಿ.ರೋಡ್ರಿಗಸ್ , ಭಾಸ್ಕರ್ ರಾವ್, ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳ್ಯ, ಆಸಿಫ್ ಇಕ್ಬಾಲ್, ನಾರಾಯಣ ಪೂಜಾರಿ ಮತ್ತು ಮೇಜನಿ ಪರಿವೀಕ್ಷಕರಾದ ನಿಸಾರ್ ಅಹ್ಮದ್ , ಎ.ಪಿ.ಭಟ್ ಹಾಗೂ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
