ಬಂಟ್ವಾಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಯಿಲ ಇಲ್ಲಿ ತುಳು ಲಿಪಿ ಕಲಿಕಾ ತರಗತಿಯು ಮಾ.14 ರಂದು ಪ್ರಾರಂಭಗೊಂಡಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ತುಳು ಲಿಪಿ ಶಿಕ್ಷಕ ಬಿ.ತಮ್ಮಯ್ಯನವರು ತುಳು ಲಿಪಿ ಬರೆದು ಚಾಲನೆ ನೀಡಿದರು. ತುಳು ಲಿಪಿ ಶಿಕ್ಷಕಿ ಜಲಜಾಕ್ಷಿ ಕುಲಾಲ್ ತರಗತಿ ನಡೆಸಿಕೊಟ್ಟರು. ಸಹ ಶಿಕ್ಷಕರು ಸ್ವಾಗತಿಸಿ ವಂದಿಸಿದರು.
