ಬಂಟ್ವಾಳ:ತಾಲ್ಲೂಕಿನ ಅಮ್ಟಾಡಿ ಗ್ರಾಮದ ಅಗೆತ್ತಿಮಾರು ಎಂಬಲ್ಲಿ ಕೀಟನಾಶಕ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಇಲ್ಲಿನ ನಿವಾಸಿ ಪೌಲ್ ಫೆರ್ನಾಂಡಿಸ್ (38) ಎಂದು ಗುರುತಿಸಲಾಗಿದ್ದು, ಮಂಗಳವಾರ ಸಂಜೆ ಮನೆಯಲ್ಲಿ ಕೀಟ ನಾಶಕ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಾರೋಗ್ಯಪೀಡಿತ ತಾಯಿ ಮೌರಿಸ್ ಫೆರ್ನಾಂಡಿಸ್ ಇವರನ್ನು ನೋಡಲು ಗುರುಪುರ ಸಮೀಪದ ಮಲ್ಲೂರಿನಿಂದ ಪುತ್ರಿ ಪ್ರೆಸಿಲ್ಲಾ ಡಿಸೋಜ ಅವರು ಮಂಗಳವಾರ ಬಂದಿದ್ದ ವೇಳೆ ಈ ಘಟನೆ ನಡೆದಿದೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
