ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಅಜ್ಜಿಬೆಟ್ಟು ಪರಿಸರದ ನಿವಾಸಿಗಳಿಗೆ ಪುರಸಭೆಯಿಂದ ಒದಗಿಸಲಾದ ಕುಡಿಯುವ ನೀರೇ ಆಧಾರವಾಗಿದ್ದು, ಆದರೆ ಇತ್ತೀಚೆಗೆ ಪೈಪ್ ಮೂಲಕ ಒದಗಿಸುವ ನೀರು ಬರುತ್ತಿಲ್ಲ.

1

2ಇದರಿಂದಾಗಿ ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟಕ್ಕೂ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ನಾವು ಹಲವು ಬಾರಿ ಪುರಸಭೆಗೆ ತಿಳಿಸಿದ್ದೇವೆ. ಆದರೆ ಸೂಕ್ತ ಕ್ರಮ ಕೈಗೊಂಡಿಲ್ಲ. ನಮಗೆ ಈ ಕುಡಿಯುವ ನೀರನ್ನು ಪ್ರತಿದಿನ ಸಮರ್ಪಕವಾಗಿ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುರಸಭೆಗೆ ಮನವಿ ಸಲ್ಲಿಸಿದ್ದಾರೆ. ಮೂರು ದಿನದೊಳಗಾಗಿ ಕ್ರಮ ಕೈಗೊಳ್ಳದಿದ್ದರೆ ಎಲ್ಲರೂ ಸೇರಿ, ಯಾವುದೇ ಪಕ್ಷ, ಯಾವುದೇ ಜಾತಿ ರಾಜಕೀಯವಿಲ್ಲದೇ ಸೋಮವಾರ ಪರಸಭೆ ಎದುರು ಪ್ರತಿಭಟನೆಯನ್ನು ನಡೆಸುದಾಗಿ ಅಜ್ಜಿಬೆಟ್ಟು ನಿವಾಸಿಗಳು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *