ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಜಸ್ಟಿಸ್ ಕೆ ಎಸ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮತ್ತು ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 80 ನೇ ರಕ್ತದಾನ ಶಿಬಿರವನ್ನು ಶ್ರೀ ಚಂದ್ರಹಾಸ್ ಶೆಟ್ಟಿ ವಿದ್ಯಾ ಚಂದ್ರಹಾಸ ಶೆಟ್ಟಿ ದಂಪತಿಗಳು ಮತ್ತು ಕೆ ಚಂದ್ರಹಾಸ್ ತುಂಬೆ , ಎಂ ಕೆ ಖಾದರ್ ಮಾರಿಪಳ್ಳ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಠಾಣಾದಿಕಾರಿ ನಂದಕುಮಾರ್ ಮತ್ತು ತುಂಬೆ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು ವಾಂಜಲಿ ಆಡಳಿತ ಟ್ರಸ್ಟಿ ಶ್ರೀ ಕೃಷ್ಣ ಕುಮಾರ್ ಪೂಂಜಾ ಸ್ವಾಗತಿಸಿದರು ಪ್ರಕಾಶ್ ಕಾರಂತ ನರಿಕೊಂಬು ದನ್ಯವಾದ ಅರ್ಪಿಸಿದರು. ಸುಲೈಮಾನ್ ಫರಂಗಿಪೇಟೆ , ಸುನಿಲ್ ಫೆರ್ನಾಂಡಿಸ್ , ನಾರಾಯಣ ಮೇರಮಜಲು , ಉಮೇಶ್ ಸೇಮಿತ , ಪದ್ಮನಾಭ ಶೆಟ್ಟಿ ಪುಂಚಮೆ ,ಮೋಹನ ಬೆಂಜನಪದವು , ಭಾಸ್ಕರ್ ಚೌಟ ಕುಮುಡೆಲು , ಸುರೇಶ ಶೆಟ್ಟಿ ಪೆಲಪಾಡಿ.
