ಉಳ್ಳಾಲ: ಸಂಶುಲ್ ಉಲಮಾ ದಾರುಸ್ಸಲಾಂ ಅಕಾಡಮಿಯ ಮಂಗಳನಗರ ನಾಟೆಕಲ್ ಸಂಸ್ಥೆಯ ವೆಬ್ಸೈಟ್ ಅನಾವರಣ ಕಾರ್ಯಕ್ರಮ  ಮಾ. 3ರಂದು ಗುರುವಾರ  ನಡೆಯಿತು.
ಸಂಸ್ಥೆಯ ವೆಬ್ಸೈಟನ್ನು ಸಂಸ್ಥೆಯ ನಿರ್ದೆಶಕರಾದ ಮೋಯಿದ್ದೀನ್ ಕುಂಞಿ ಹಾಜಿ ಮಾರಾಠಿಮೂಲೆ ಅನಾವರಣ ಗೈದರು.
website 03

website 01
ಸಂಸ್ಥೆಯ ಕೋಶಾಧಿಕಾರಿ ಅಬೂಸಾಲಿಹ್ ಹಾಜಿ ಮಾತನಾಡಿ, ಸದ್ಯಕ್ಕೆ ಮಂಗಳನಗರದಲ್ಲಿ ಕಾರ್ಯಚರಿಸುತ್ತಿರುವ ಈ ಸಂಸ್ಥೆಯನ್ನು ಕಿನ್ಯದ ವಾದಿತೈಬಕೆ ವಿಸ್ತರಿಸುವ ಯೋಜನೆ ಇದ್ದು ಅಲ್ಲಿ ಕೂಡಾ ವಿಶಾಲ ಕ್ಯಾಂಪಸ್ನ ಯೋಜನೆನ್ನು ರೂಪಿಸಲಾಗಿದೆ. ಅಲ್ಲದೆ ಈ ನಿಟ್ಟಿನಲ್ಲಿ ಇತ್ತೀಚೆಗೆ ಶಿಲಾನ್ಯಾಸ ಕೂಡಾ ನಡೆದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸೈಯದ್ ಅಮೀರ್ ತಂಙಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಎಂದು ಸಂಸ್ಥೆಯ ಕಾರ್ಯದರ್ಶಿ  ಸಿರಾಜುದ್ದೀನ್ ಅಲಂಕಾರ್ ಮಾತನಾಡಿ, ಸಂಶುಲ್ ಉಲಮಾ ದಾರುಸ್ಸಲಾಂ ಅಕಾಡಮಿಯು ಕಳೆದ 3 ವರ್ಷಗಳಿಂದ ನಾಟೆಕಲ್ ಸಮೀಪದ ಮಂಗಳ ನಗರದಲ್ಲಿ ಕಾರ್ಯಚರಿಸುತ್ತಾ ಇದ್ದು ಇಲ್ಲಿನ ಹಲವಾರು ವಿದ್ಯಾರ್ಥಿಗಳು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಸಂಸ್ಥೆಯನ್ನು ಇನ್ನಷ್ಟು ವಿಸ್ತೃತಗೊಳಿಸುವ ಗುರಿಯನ್ನು ಹೊಂದಿದು, ಈ ಸಾಲಿನ ಶೈಕ್ಷಣಿಕ ವರ್ಷಕ್ಕೆ ಹೆಚ್ಚಿನ ವಿದ್ಯಾರ್ಥಿಗಳ ನೋಂದಣಿಗೆ ಕ್ರಮ ಕೈಗೊಳಲಾಗುತ್ತಿದೆ.
ಸಮಸ್ಥೆಯ ಪ್ರಾಂಶುಪಾಲರಾದ ಕಾಸೀಂ ದಾರಿಮಿ ಪ್ರಾಸ್ಥಾವಿಕ ಮಾತನಾಡಿದರು.ಸಂಸ್ಥೆಯ ಬಗೆಗಿನ ಹೆಚ್ಚಿನ ಮಾಹಿತಿಯು  www ದಾರುಸ್ಸಲಾಂ ವಾದಿತೈಪಾ . ಕಾಂ ನಲ್ಲಿ ದೊರೆಯಲಿದೆ.

By Suddi9

Leave a Reply

Your email address will not be published. Required fields are marked *