ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಅಂಗವಾಗಿ ಗರ್ಭಗುಡಿಯ ಕಾಮಗಾರಿ ಬಗ್ಗೆ ದೇವಳಕ್ಕೆ ಅಗತ್ಯವಿರುವ ಮರ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಮೆರವಣಿಗೆಯ ಮೂಲಕ ತರಲಾಗುವುದು.
ಮಾ.6 ರಂದು ಭಾನುವಾರ ಬೆಳಗ್ಗೆ 11.30ಕ್ಕೆ ಗುರುಪುರ ಕೈಕಂಬ ಪೊಳಲಿ ದ್ವಾರದ ಹತ್ತಿರ ಸೇರಿ ವಿವೇಕನಾಂದ ರಸ್ತೆ ಮೂಲಕ ಸಾಗಿ ಪೊಳಲಿ ದೇವಳಕ್ಕೆ ಸಾವಿರ ಸೀಮೆಯ ಭಕ್ತಾದಿಗಳೊಂದಿಗೆ ಮೆರವಣೆಗೆಯಲ್ಲಿ ತರಲಾಗುವುದು ಎಂದು ದೇವಳದ ಪ್ರಕಟನೆ ತಿಳಿಸಿದೆ. ಇದೇ ಸಂದರ್ಭದಲ್ಲಿ ದೇವಳದ ಮರದ ಕೆತ್ತನೆ ಕೆಲಸದ ದಾರುಶಿಲ್ಪ ಮಹೂರ್ತವು ನೆರವೇರಲಿದೆ ಎಂದು ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
