ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಕ್ಷೇತ್ರದ ದಶಮಾನೋತ್ಸವದ ಪ್ರಯುಕ್ತ ಕ್ಷೇತ್ರದ ದೈವಗಳಿಗೆ ರಜತ ಪ್ರಭಾವಳಿ ಹಾಗೂ ಸರ್ವಾಭರಣ ಸಮರ್ಪಣೆಯು ಭಾನುವಾರ ಮಣಿಹಳ್ಳದಿಂದ ಶೋಭಾಯಾತ್ರೆಯ ಮೂಲಕ ತೆರಳಿ ಕ್ಷೇತ್ರಕ್ಕೆ ಅರ್ಪಿಸಲಾಯಿತು.
ಕೇಲ್ದೋಡಿ ಗುತ್ತಿನ ಕೋಟಿ ಪೂಜಾರಿಯವರು ತೆಂಗಿನ ಕಾಯಿ ಒಡೆಯುವ ಮೂಲಕ ಶೋಭಾಯಾತ್ರಯನ್ನು ಉದ್ಘಾಟಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ ಅಂಚನ್ ಭಾಗವದ್ವಜ ಹಸ್ತಾಂತರಿಸಿದರು.

BTW_FEB29_1ಪ್ರಮುಖರಾದ ಕರುಣೇಂದ್ರ ಪೂಜಾರಿ ಕೊಂಬ್ರಬೈಲು, ಕಾರ್ಯದರ್ಶಿ ಆನಂದ ಕೋಟ್ಯಾನ್, ಸದಸ್ಯರಾದ ಗೋಪಾಲ ಪೂಜಾರಿ ಅಮೈ, ಜನಾರ್ದನ ಪೂಜಾರಿ ಕೇಲ್ದೋಡಿ, ಕೋಟಿ ಚೆನ್ನಯ ಪಾತ್ರಿಗಳಾದ ನೋಣು ಮತ್ತು ನೋಣಯ್ಯ ಪೂಜಾರಿ, ಪ್ರಮುಖರಾದ ಕೊರಗಪ್ಪ ಪೂಜಾರಿ ಪಿಲ್ಕಾಜೆಗುತ್ತು, ಶೇಖರ ಅಂಚನ್ ಪಿಲ್ಕಾಜೆಗುತ್ತು, ಪುರುಷೋತ್ತಮ ಅಂಚನ್ ಪಿಲ್ಕಾಜೆಗುತ್ತು, ರವಿ ಪೂಜಾರಿ ಪಾರೊಟ್ಟು, ಸಂಜೀವ ಪೂಜಾರಿ ಪಿಲಿಂಗಾಲು, ಪೂವಪ್ಪ ಮೆಂಡನ್ ಕರೆಂಕಿ, ಕೇಶವಗೌಡ, ಲಕ್ಷ್ಮೀ ನಾರಯಣ ಗೌಡ, ಧರ್ಣಪ್ಪ ಪೂಜಾರಿ ರಾಮನಗರ , ರಾಮಚಂದ್ರ ಪೂಜಾರಿ ಕರೆಂಕಿ, ದೇವಪ್ಪ ಕುಲಾಲ್ ಪಂಜಿಕಲ್ಲು, ರಾಮಚಂದ್ರ ಗೌಡ ಮಣಿ, ಮೋಹನದಾಸ ನೂಜಂತ್ತೋಡಿ, ಜಗದೀಶ ಪೂಜಾರಿ ಕೇಲ್ದೋಡಿ, ತೇಜಸ್, ಕೇಶವ ಪೂಜಾರಿ, ಕೃಷ್ಣಪ್ಪ ಪೂಜಾರಿ, ವಿಶ್ವನಾಥ ಪೂಜಾರಿ, ವಸಂತ ಪೂಜಾರಿ ಸೇರಿದಂತೆ ನೂರಾರು ಮಂದಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೇಲ್ದೋಡಿ ಕ್ಷೇತ್ರದ ಮಹಾದ್ವಾರದಿಂದ ಕೇಲ್ದೋಡಿ ಬ್ರಹ್ಮಶ್ರೀ ನಾರಾಯಣ ಗುರು ಭಜನಾಮಂಡಳಿಯ ಸದಸ್ಯರಿಂದ ಭಜನೆ ನಡೆಸಿಕೊಟ್ಟರು.

ಇಂದಿನಿಂದ ಜಾತ್ರೋತ್ಸವ:
ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಕ್ಷೇತ್ರದಲ್ಲಿ ಜಾತ್ರೋತ್ಸವವು ಮಾ. 1 ಮಂಗಳವಾರದಿಂದ ಮಾ.3 ಗುರುವಾರದವರೆಗೆ ನಡೆಯಲಿದೆ. ಮಾ. 1 ರಂದು ಬೆಳಿಗ್ಗೆ ಗಂಟೆ 9 ಕ್ಕೆ ಒಂಟಿ ನಾಗ ಮತ್ತು ಚಿತ್ರಕೂಟ ನಾಗಬನದಲ್ಲಿ ಆಶ್ಲೇಷ ಬಲಿ ಮತ್ತು ನಾಗತಂಬಿಲ, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಮಾ. 3ರಂದು ಬ್ರಹ್ಮಬೈದರ್ಕಳ ಜಾತ್ರೆ ನಡೆಯಲಿದೆ. ಜಾತ್ರೋತ್ಸವದ ಅಂಗವಾಗಿ ವಿವಿಧ ಸಾಂಸ್ಕ್ರ ತಿಕ ಕಾರ್ಯಕ್ರಮಗಳು ಜರುಗಲಿದೆ.

By Suddi9

Leave a Reply

Your email address will not be published. Required fields are marked *