ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಅರ್ಬಿಗುಡ್ಡೆಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಅಂಬೇಡ್ಕರ್ ಸಮುದಾಯ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಪುರಸಭಾದ್ಯಕ್ಷೆ ವಸಂತಿ ಚಂದಪ್ಪ, ಬುಡ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಪುರಸಭಾ ಸದಸ್ಯರಾದ ಗಂಗಾಧರ್, ಸದಾಶಿವ ಬಂಗೇರಾ, ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಪ್ರವೀಣ್ ಬಿ., ಮಹಮ್ಮದ್ ಶರೀಫ್,ಚಂಚಲಾಕ್ಷಿ, ಜಗದೀಶ ಕುಂದರ್, ಮಹಮ್ಮದ್ ನಂದರಬೆಟ್ಟು, ನಾಮನಿರ್ದೆಶಿತ ಸದಸ್ಯರಾದ ಪ್ರವೀಣ್ ಕಿಣಿ, ನೋರ್ಬರ್ಟ್ ಡಿಸೋಜಾ, ಮುಖ್ಯಾಧಿಕಾರಿ ಸುಧಾಕರ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜನಾರ್ದನ ಚೆಂಡ್ತಿಮಾರ್, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಚಿಕ್ಕ, ಅಮ್ಮು ಹಾಗೂ ಸರ್ವ ಸದಸ್ಯರು ಹಾಜರಿದ್ದರು.
