ಬಂಟ್ವಾಳ: ಕಾರ್ಯಕರ್ತರು ವಿಶ್ವಾಸವನ್ನು ಬೆಳೆಸಿಕೊಂಡು, ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಿ ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಅವರು ಕರೆ ನೀಡಿದರು.
ಅವರು ಬಿ.ಸಿರೋಡ್ ಬಿ.ಜೆ.ಪಿ ಕಛೇರಿಯಲ್ಲ ನಡೆದ ಸಜಿಪ ಮುನ್ನೂರು ಜಿ.ಪಂ.ಕ್ಷೇತ್ರದ ಕಾರ್ಯಕರ್ತರ ಅವಲೋಕನ ಸಭೆಯಲ್ಲಿ ಮಾತನಾಡಿದರು. ಸೋಲಿನ ಬಗ್ಗೆ ಗೊಂದಲ ಮತ್ತು ನಿರಾಸೆ ಬೇಡ ಮುಂದಿನ ಚುನಾವಣೆಯ ದೃಷ್ಟಿಯಿಂದ ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿಗಾಗಿ ಶ್ರಮಿಸಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಬಿಜೆಪಿ ಅಧ್ಯಕ್ಷ ಜಿ.ಆನಂದ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಪದ್ಮನಾಭ ಕೊಟ್ಟಾರಿ, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ, ತುಂಗಪ್ಪ ಬಂಗೇರ, ಮಹಮ್ಮದ್ ಮುಸ್ತಾಫ, ಯಶವಂತ ದೇರಾಜೆ, ಮನೋಹರ ಕುಂಜತ್ತೂರು, ಲೇಖಾ ಪಿ.ಭಂಡಾರಿ, ಯಶವಂತ ಕರಿಯಂಗಳ ಉಪಸ್ಥಿತರಿದ್ದರು. ರಾಮ್‍ದಾಸ ಬಂಟ್ವಾಳ ಸ್ವಾಗತಿಸಿ, ದಿನೇಶ್ ಅಮ್ಟೂರು ವಂದಿಸಿದರು. ದೇವಪ್ಪ ಪೂಜಾರಿ ನಿರೂಪಿಸಿದರು.
