ಗ್ರಾಮೀಣ ವಿಷಯದ ಅಧ್ಯಯನ ಅಗತ್ಯ : ಗುರುವಪ್ಪ ಬಾಳೇಪುಣಿ
ವಾಮಂಜೂರು: ಗ್ರಾಮೀಣ ಪತ್ರಿಕೋದ್ಯಮ ವರದಿಗಾರಿಕೆ ಹೊಸ ಆಯಾಮ ನೀಡಿದ್ದು ಪತ್ರಕರ್ತರಾಗುವವರು ಗ್ರಾಮೀಣ ಭಾಗದ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕೆಂದು ಪತ್ರಕರ್ತ ಗುರುವಪ್ಪ ಬಾಳೇಪುಣಿ ಹೇಳಿದರು.
ಸೈಂಟ್ ರೇಮಂಡ್ ಕಾಲೇಜು ಇದರ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ವಾರಾಂತ್ಯ ಪತ್ರಿಕೋದ್ಯಮ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಅನೇಕ ವಿಷಯಗಳು ಅಡಗಿದ್ದು ಅವುಗಳ ಬಗ್ಗೆ ಅಧ್ಯಯನ ಮಾಡುವ ಮೂಲಕ ವರದಿಗಾರಿಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ವಿಷಯಗಳ ಬಗ್ಗೆ ಆಸಕ್ತಿ ವಹಿಸಬೇಕು ಹರೇಕಳ ಹಜಬ್ಬ ಅವರಂತಹ ಸಾಮಾನ್ಯ ವ್ಯಕ್ತಿಯನ್ನು ಗುರುತಿಸುವಂತೆ ಮಾಡಿದ್ದು ಗ್ರಾಮಿಣ ಪತ್ರಿಕೋದ್ಯಮ. ಕರಾವಳ ಭಾಗದ ಕೃಷಿಕರ ತುಳುವೆ ಆಚರಣೆ ಸಂಪ್ರದಾಯಗಳಲ್ಲಿ ಗ್ರಾಮೀಣ ವಿಷಯಗಳ ಸೊಗಡಿದಡ ಅಂತಹುಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಬರೆಯಬೇಕು ಎಂದರು.
ವಾರಂತ್ಯ ಪತ್ರಿಕೋದ್ಯಮ ಮುಂದೆ ಪತ್ರಕರ್ತರಾಗುವವರಿಗೆ ಸೂಕ್ತ ವೇದಿಕೆಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಗೋವಿಂದದಾಸ ಕಾಲೇಜು ಇದರ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಶ್ರೀನಿವಾಸ ಹೊಡೆಯಾಲ, ಲೇಖಕ ಮಹೇಶ್ ಆರ್ ನಾಯಕ್ , ಉಪಪ್ರಾಂಶುಪಾಲೆ ಸಗಯಾ ಸೆಲ್ವಿ ಉಪಸ್ಥಿತರಿದ್ದರು. ಆಧ್ಯಕ್ಷತೆಯನ್ನು ಪ್ರಿನ್ಸಿಪಾಲ್ ಡಾ.ಸೆಲಿನ್ವಾಸ್ ವಹಿಸಿದ್ದರು.
ಸೈಂಟ್ ಆಗ್ನೇಸ್, ಕಾವೂರು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗ್ರಾಮೀಣ ವರದಿಗಾರಿಕೆ ತಯಾರಿ ಬಗ್ಗೆ ಪತ್ರಕರ್ತ ಗುರುವಪ್ಪ ಬಾಳೇಪುಣಿ ವರದಿ ತಯಾರಿ ಬಗ್ಗೆ ಪತ್ರಕರ್ತ ವೇಣು ವಿನೋದ್ ಕೆ.ಎಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಉಪನ್ಯಾಸಕ ಡೊಂಬಯ್ಯ ಇಟ್ಕಿದು ಸ್ವಾಗತಿಸಿದರು. ರೇಷ್ಮಾ, ಸುಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು. ಸುಗುಣಾ ವರದಿ ವಾಚಿಸಿದರು.





















