ಬಿಸಿರೋಡ್ ; ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಗೆಲುವಿನ ಹಿನ್ನೆಲೆಯಲ್ಲಿ ಶುಕ್ರವಾರ ಬಿ.ಸಿ.ರೋಡ್ ಕೈಕಂಬದ ಪೊಳಲಿ ದ್ವಾರದಲ್ಲಿ ಮೆರವಣಿಗೆಗೆ ಚಾಲನೆನೀಡಿದರು. ಪೊಳಲಿ ದ್ವಾರದಿಂದ ಆರಂಭಗೊಂಡಮೆರವಣಿಗೆಯು ಬಿ.ಸಿ.ರೊಡ್ ,ಬಂಟ್ವಾಳ ಪೇಟೆ,ಜಕ್ರಿಬೆಟ್ಟು ಮುಂತಾದ ಕಡೆಗಳಿಗೆ ತೆರೆದವಾಹನದಲ್ಲಿ ತೆರಳಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಕುಣಿದು ಸಂಭ್ರಮಪಟ್ಟರು ನಂತರ ಬಂಟ್ವಾಳ ಬೈಪಾಸ್ ಜೆಂಕ್ಷನ್ನಲ್ಲಿ ಸಮಾಪನಗೊಂಡಿತು.ಈಸಂದರ್ಭದಲ್ಲಿ ಉಡುಪಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಶೋಭಾ ಕರಂದ್ಲಾಜೆ ಅವರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಸಂಸದ ನಳಿನ್ ಕುಮಾರ್ ಕಟೀಲ್ ,ಉಡುಪಿ ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ , ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹನಾಯಕ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಆನಂದ ಜಿ., ಪಕ್ಷದ ಪ್ರಮುಖರಾದ ರುಕ್ಮಯ ಪೂಜಾರಿ, ರಾಜೆಶ್ ನಾಯಕ್, ತುಂಗಪ್ಪ ಬಂಗೇರಾ, ಸುಲೋಚನ ಭಟ್, ರಾಮ್ ದಾಸ್, ದೇವ್ ದಾಸ್ ,ಪುರುಷ ಸಾಲಿಯಾನ್ ದಿನೇಶ್ ಭಂಡಾರಿ, ದೇವಪ್ಪ ಪೂಜಾರಿ ಮೊದಲಾದವರಿದ್ದರು.ಮತ್ತು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.






