ಬಜ್ಪೆ: ನರೇಂದ್ರ ಮೋದಿ ಯಾರಿಗೆಲ್ಲಾ ಸ್ಫೂತರ್ಿಯಾಗುತ್ತಾರೋ ಗೊತ್ತಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಮೋದಿ ಅವರಿಗೆ ತನ್ನ ತಾಯಿ ಮೇಲಿನ ಪ್ರೀತಿಯನ್ನು ಕಂಡು ಅಮ್ಮನ ನೆನಪಾಗಿ ಓಡೋಡಿ ಬಂದು ತನ್ನ ತಾಯಿಯ ಕಾಲಿಗೆರೆಗಿ ಆಶೀವರ್ಾದ ಪಡೆದು ಹೋಗಿದ್ದಾನೆ.
ಇದು ನಡೆದಿದ್ದು ಮಳಲಿಯಲ್ಲಿ. ಅಮ್ಮನ ನೆನಪಾಗಿ ಓಡೋಡಿ ಬಂದವನ ಹೆಸರು ಸುಜೇಶ್ (ಹೆಸರು ಬದಲಿಸಲಾಗಿದೆ)
ಮೋದಿಯವರಿಗೆ ತನ್ನ ತಾಯ ಹೀರಾಬೆನ್ ಮೇಲೆ ಎಷ್ಟು ಪ್ರೀತಿ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಏನಾದರೊಂದು ಸಾಧಿಸಿದಾಗ ತನ್ನ ತಾಯಿಯ ಆಶೀವರ್ಾದ ಪಡೆದುಹೋಗುವುದು ನರೇಂದ್ರ ಮೋದಿಯವರ ಜಾಯಮಾನ. ಅಲ್ಲದೆ ಮೋದಿ ಹಾಗೂ ಹೀರಾಬೆನ್ ಸಂಬಂಧದ ಬಗ್ಗೆ ಮಾಧ್ಯಮಗಳು ವಿಶೇಷ ರೀತಿಯಲ್ಲಿ ವರದಿ ಪ್ರಕಟಿಸುತ್ತಿದೆ.

namo
ಅದು ಮೇ 16….
ಅದು ಮೇ 16. ಇಡೀ ದೇಶಕ್ಕೆ ಮತದಾನ ನಡೆದು ಫಲಿತಾಂಶ ಘೋಷಣೆಯಾಗುವ ದಿನವದು. ಅದರಂತೆ ಎನ್ಡಿಎ ಮೃತ್ರಿಕೂಡ ಸ್ಪಷ್ಟ ಬಹುಮತಗಳಿಂದ ಗೆದ್ದಾಗಿತ್ತು. ಮೋದಿ ಅಲೆ ಚೆನ್ನಾಗಿ ಕೆಲಸ ಮಾಡಿದ್ದರಿಂದ ಈ ವಿಜಯಕ್ಕೆ ಕಾರಣ ಎಂದು ವಿಶ್ಲೇಷಿಸುತ್ತಿದ್ದಾರೆ.
ನರೇಂದ್ರ ಮೋದಿ ಗೆದ್ದ ತಕ್ಷಣ ಭೇಟಿ ಮಾಡಲು ಹೋಗಿದ್ದು ಗುಜರಾತ್ನಲ್ಲಿರುವ ತನ್ನ ತಾಯಿ ಹೇರಾಬೆನ್ ಅವರನ್ನು.
ದೃಶ್ಯ ಮಾಧ್ಯಮಗಳಲ್ಲಿ ಈ ಬಗ್ಗೆ ವಿಶೇಷ ವರದಿಯನ್ನು ಮಾಡಿತ್ತು. ಮೋದಿ ತನ್ನ ತಾಯಿ ಹೀರಾಬೆನ್ರ ಕಾಲಿಗೆರಗಿ, ಸನಮಸ್ಕರಿಸುತ್ತಾ ಉಭಯಕುಶಲೋಪರಿ ನಡೆಸುವುದನ್ನು ಮಾಧ್ಯಮಗಳು ಯಥಾವತ್ತಾಗಿ ಹಾಗೂ ಭಾವನಾತ್ಮಕ ರೀತಿಯಲ್ಲಿ ಪ್ರಸಾರಿಸಿದ್ದವು.
ಸುಜೇಶ್ ಎನ್ನುವವರು ತನ್ನ ತಾಯಿಯಿಂದ ದೂರವಾಗಿ ಬರೋಬ್ಬರಿ ಹತ್ತು ವರ್ಷಗಳ ಮೇಲಾಗಿದೆ. ದೂರದ ಮುಂಬೈ ನಗರದಲ್ಲಿ ಬೇರೆಯೇ ಸಂಸಾರ ಮಾಡಿಕೊಂಡು ಜೀವನ ನಡೆಸುವ ಅವರು ಮೇ 16ರ ರಾತ್ರಿ ಮೋದಿ ತನ್ನ ತಾಯಿಯ ಕಾಲಿಗೆರಗಿ ಆಶೀವರ್ಾದ ಪಡೆಯುವುದನ್ನು ನೋಡಿದ್ದರು. ತನ್ನ ಅಮ್ಮನ ನೆನಪು ಕೂಡಾ ಬಂದಿತು. ಸಇದನ್ನು ನೋಡಿದ ಅವರ ಕಣ್ಣುಗಳು ನೀರಿನಿಂದ ತೇವವಾಯ್ತು.
ಸುಮಾರು ಹತ್ತು ವರ್ಷಗಳ ಮುಂಚೆ ತನ್ನ ತಾಯಿಯನ್ನು ಬಿಟ್ಟು ದೂರದ ಮುಂಬೈ ನಗರಿಗೆ ಓಡಿದ ನೆನಪಾಗಿ ಅಮ್ಮ ಹೇಗಿದ್ದಾರೋ ಎನೋ ಎಂಬ ಆಲೋಚನೆ ಬಂದಿತು. ಕಣ್ಣಲ್ಲಿ ನೀರು ತುಂಬಿತು. ಸುಮಾರು ಹತ್ತು ವರ್ಷಗಳ ಕಾಲ ಅಮ್ಮನ ಸಂಪರ್ಕವಿಲ್ಲ, ಊರವರು ಹೇಗಿದ್ದಾರೆ ಎಂಬ ಮಾಹಿತಿ ಇಲ್ಲ. ಆದರೆ ಅಮ್ಮನ ನೋಡಲೇಬೇಕು ಎಂಬ ದುಗುಡ, ತಳಮಳ ಹುಟ್ಟಿಕೊಂಡೇ ಬಿಟ್ಟಿತು.
ಸುಜೇಶ್ ತಡಮಾಡಲಿಲ್ಲ. ತಕ್ಷಣ ಮಂಗಳೂರು ರೈಲುಹತ್ತಿಯೇ ಬಿಟ್ಟರು. ಸೀದಾ ಮಂಗಳೂರಿನ ರೈಲ್ವೇ ನಿಲ್ದಾಣಕ್ಕೆ ಇಳಿದಾಗ ಸಂಜೆಯ ಮಬ್ಬುಗತ್ತಲು ಆವರಿಸಿತ್ತು. ಅಲ್ಲಿಂದ ಬಸ್ ಹಿಡಿದು ಮನೆಗೆ ತಲುಪಿದಾಗ ರಾತ್ರಿ ಒಂಬತ್ತು ಗಂಟೆ ಮೇಲಾಗಿತ್ತು.
ರಾತ್ರಿಯ ವೇಳೆ ಬಂದ ಅಪರಿಚಿತ(?) ವ್ಯಕ್ತಿಯನ್ನು ನೋಡಿ ಆ ಮುದಿ ತಾಯಿ ಹಾಗೂ ಮುದಿ ತಂದೆ ಅಚ್ಚರಿಚಕಿತರಾದರು. ಕೊನೆಗೆ ಮಗನೇ ಮಾತಾಡಲು ತೊಡಗಿ, `ಅಮ್ಮಾ ನಾನಮ್ಮ ನಿಮ್ಮ ಮಗ…..’ ಎಂದಷ್ಟೇ ಹೇಳಿದರು.
ಇದನ್ನು ಕೇಳಿದ ತಕ್ಷಣ ಮುದಿ ತಂದೆ-ತಾಯಿಯ ಕಣ್ಣಾಲಿಗಳು ತೇವವಾದವು. ಅವರೊಂದಿಗಿದ್ದ ಮಗನ ಕಣ್ಣಾಲಿಗಳು ನೀರಿನಿಂದ ತುಂಬಿಕೊಂಡವು.
ಅದೊಂದು ಭಾವುಕ ಕ್ಷಣ……… ತುಂಬಾ ಹೊತ್ತು ಅಮ್ಮನ ಮಡಿಲಲ್ಲಿ ಮಲಗಿದ ಆ ಕಂದನ ಬಿಗಿದಪ್ಪುಗೆಯಲಿ ಖುಷಿ ಪಟ್ಟ ಆ ಮಗನನ್ನು ಸಂತೈಸಲು ಆ ಮುದಿ ತಂದೆ ತಾಯಿ ಬಿಟ್ಟು ಬೇರೆ ಯಾರೂ ಇರಲಿಲ್ಲ. `ಅಮ್ಮಾ ನಾನು ಟಿ.ವಿ ನೋಡ್ತಾ ಇದ್ದೆ. ಆಗ ಪ್ರಧಾನಿಯಾಗಲಿರುವ ಮೋದಿ ತನ್ನ ತಾಯಿಯ ಕಾಲಿಗೆರಗಿ ಆಶೀವರ್ಾದ ಪಡೆಯುವುದನ್ನು ನೋಡಿ ತಡೆಯಲಾಗಲಿಲ್ಲ, ತಕ್ಷಣ ನಿಮ್ಮ ನೆನಪಾಯ್ತು, ಅದಕ್ಕಾಗಿ ಬಂದಿದ್ದೇನೆ…’ ಎಂದಾಗ ತಾಯಿ ಮೋದಿಗೆ ಎಷ್ಟು ಧನ್ಯವಾದ ಹೇಳಿದ್ದರೋ ಏನೋ?
ಒಂದು ರಾತ್ರಿ ಅಲ್ಲೇ ಕಳೆದ ಮಗ, ಮರುದಿನ ಇದೊಂದು ಸುದ್ದಿಯಾಗುವುಬೇಡ ಎಂದೂ ಅಥವಾ ಬೇರೆ ಯಾವ ಕಾರಣಕ್ಕೋ ಏನೋ, ಗಂಟು ಮೂಟೆ ಕಟ್ಟಿಕೊಂಡು ತಕ್ಷಣ ಮತ್ತೆ ಮುಂಬೈಗೆ ತೆರಳಿದ್ದಾರೆ.
ತನ್ನ ಮಗ ತನ್ನಿಂದ ದೂರವಾಗಿರುವುದನ್ನು ನೋಡಿ ಮುದಿ ತಂದೆ ತಾಯಿ ಕಂಗಾಲಾಗಿದ್ದರು. ಮಗ ಇದ್ದನೋ ಇಲ್ಲವೋ ಎಂಬ ಚಿಂತೆಯಲ್ಲೇ ಕಾಲ ಕಳೆಯುತ್ತಿದ್ದರು. ಅನೇಕ ದೇವರಿಗೆ ಹರಕೆಗಳನ್ನೂ ಸಲ್ಲಿಸಲಾಗಿತ್ತು. ಆದರೆ ಮಗ ಸುಖವಾಗಿದ್ದಾನೆಂಬ ವಿಷಯ ತಿಳಿದುಕೊಂಡು ನನಗಷ್ಟೇ ಸಾಕು ಎಂಬ ನಿಲರ್ಿಪ್ತತೆಯಿಂದ ತಾಯಿ ಜೀವಿಸುವಂತಾಗಿದೆ. ಲೋಕಪರಿಜ್ಞಾನ ಇಲ್ಲದ ಆ ತಾಯ, ಮೋದಿ ಯಾವ ಹೆತ್ತ ಮಗನೋ ಏನೋ, ಆತ ನನಗೂ ಕೂಡಾ ಮಗನೆ, ನನ್ನ ಮಗನನ್ನು ಕಾಣಿಸುವಂತೆ ಮಾಡಿದ ಆ ಮಗನ ಹೊಟ್ಟೆ ತಣ್ಣಗೆ ಇಟ್ಟಿರಲಿ ಎಂದಷ್ಠ ಹೇಳಿ ಭಾವುಕಾರಗುತ್ತಾರೆ.

By suddi9

Leave a Reply

Your email address will not be published. Required fields are marked *