ನವದೆಹಲಿ: ಹತ್ತು ವರ್ಷಗಳ ಕಾಲದೇಶವನ್ನಾಳಿದ ಮನಮೋಹನ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬಳಿಕ ಮಾಜಿ ಪ್ರಧಾನಿಯಾಗಲಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನವರು ಶನಿವಾರ ರಾಷ್ಟ್ರಪತಿಗೆ ಸಲ್ಲಿಸಲಿದ್ದಾರೆ.
2004 ರಿಂದ ಯುಪಿಎ 1 ಮತ್ತು ಯುಪಿಎ 2 ಸರ್ಕಾರದ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರೈಸಿದ ಆರ್ಥಿಕ ತಜ್ಞರೂ ಆಗಿರುವ ಮನಮೋಹನ್ ಸಿಂಗ್, 2014 ರ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದಿರುವ ಬಿಜೆಪಿಗೆ ಸರ್ಕಾರ ರಚಿಸಲು ತನ್ನ ಸ್ಥಾನ ತೆರವು ಮಾಡಿಕೊಡುವ ಕ್ರಮವಾಗಿ ಈ ರಾಜೀನಾಮೆ ಸಲ್ಲಿಸಿದ್ದಾರೆ. ಮೇ 21ರಂದು ನರೇಂದ್ರ ಮೋದಿಯವರ ಪಟ್ಟಾಭಿಷೇಕ ನಡೆಯಲಿದೆ.

