ಬಂಟ್ವಾಳ: ತಾಲ್ಲೂಕಿನಲ್ಲಿ ಬಿ.ಮೂಡ ಗ್ರಾಮಗಳಿಗೆ ಸಂಬಂಧಪಟ್ಟ ಪುರಾತನ ಹಿನ್ನೆಲೆ ಹೊಂದಿರುವ ಪ್ರಸಿದ್ಧ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಫೆ. 13ರಿಂದ 15ರತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಿತು.
13ರಂದು ಬೆಳಿಗ್ಗೆ ಗಂಟೆ 7ರಿಂದ ಪ್ರಾರ್ಥನೆ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ವಾಸ್ತುಹೋಮ, ರಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ ನಡೆಯಿತು. ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ರಾತ್ರಿ 7ಕ್ಕೆ ಸುಮನಸ ಯಕ್ಷ ಬಳಗ ಬಂಟ್ವಾಳ ಇವರಿಂದ ಯೋಗೀಶ್ ಅಳದಂಗಡಿ ಮಾರ್ಗದರ್ಶನದಲ್ಲಿ ಇವರಿಂದ ಏಕಾದಶಿ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಡೆಯಿತು.
114ರಂದು ಬೆಳಿಗ್ಗೆ 7ರಿಂದ ಗಣಹೋಮ, ಬಿಂಬ ಕಲಶ ಪೂಜೆ, ಬಿಂಬ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ 6,00ರಿಂದ ದೀಪಾಲಂಕಾರ ಪೂಜೆ, ವಾದ್ಯಸೇವೆ, ಮಹಾಪೂಜೆ, ಬಲಿ ಹೊರಟು ವಸಂತ ಕಟ್ಟೆ ಪೂಜೆ ವಿಶೇಷ ನರ್ತನ ಬಲಿ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂಡಳಿ ಬ್ರಹ್ಮರಕೂಟ್ಲು ಇವರಿಂದ ನೃತ್ಯ ಭಜನಾ ಕಾರ್ಯಕ್ರಮ, 15ರಂದು ಬೆಳಿಗ್ಗೆ 7ರಿಂದ ಗಣಹೋಮ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ನವಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ವಿಶೇಷ ರಂಗಪೂಜೆ , ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ 10.30ಕ್ಕೆ ಶ್ರೀ ಪದ್ಮಶ್ರೀ ಪದ್ಮಭೂಷಣ್ ಡಾ| ಕೆ. ಜೆ. ಯೇಸುದಾಸ್ ಇವರ ಶಿಷ್ಯರಾದ ಗಾನಭೂಷಣ ಶ್ರೀ ಕೆ. ವೆಂಕಟಕೃಷ್ಣ ಭಟ್ ಹಾಗೂ ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *