ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ಗ್ರಾಮ ದಲ್ಲಿ ರೂ.1ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದ್ದು ಸುತ್ತು ಪೌಳಿಯ ಮಹಾದ್ವಾರದ ದಾರಂದ ಮುಹೂರ್ತವನ್ನು ಫೆ.15 ಸೋಮವಾರದಂದು ನೆರವೇರಿಸಿ ಹೆಬ್ಬಾಗಿಲನ್ನು ಪ್ರತಿಷ್ಠಾಪಿಸಲಾಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಸದಾನಂದ ಪೂಂಜ, ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್, ಎ.ಜಯಶಂಕರ ಬ್ರಾಸಿತ್ತಾಯ, ಕೆ.ಸದಾನಂದ ಶೆಟ್ಟಿ, ಯೋಗೀಶ್ ಬೆಳ್ಚಾಡ, ಉಪೇಂದ್ರ ಆಚಾರ್ಯ, ದಿವಾಕರ , ಗಣೇಶ, ಜಯಪ್ರಕಾಶ್ , ಪರಮೇಶ್ವರ ಹೇರಳೆ, ರಾಘವೇಂದ್ರ ಪಿ. ಉಪಸ್ಥಿತರಿದ್ದರು.
