ಬಂಟ್ವಾಳ: ಕಿಶೋರ್ ಅವರ ಛಾಯಾಗ್ರಹಣ ಅದ್ಭುತ ಸಾಧನೆಯಾಗಿದೆ, ಒಂದೊಂದು ಛಾಯಾಚಿತ್ರಗಳಿಂದ ಅದರದ್ದೇ ಆದ ಭಾವನೆಗಳು ವ್ಯಕ್ತವಾಗುತ್ತಿದ್ದು, ಮನಮುಟ್ಟುವಂತಿದೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ.ಪ್ರಭಾಕರ ಭಟ್ ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾದ ಮಾಧ್ಯಮ ಛಾಯಾಗ್ರಾಹಕ ಕಿಶೋರ್ ಪೆರಾಜೆಯವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನ “ರಜತನಡೆಯಲ್ಲೊಂದು ಛಾಯಾಕಿರಣ” ಛಾಯಾಚಿತ್ರಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಶುಭಹಾರೈಸಿ ಮಾತನಾಡಿದ ಅವರು, ಸಮಾಜ ಸುಧಾರಣೆಯಲ್ಲಿ ಪತ್ರಕರ್ತರು ಹಾಗೂ ಮಾಧ್ಯಮ ಛಾಯಾಗ್ರಾಹಕರ ಜವಬ್ದಾರಿ ಮಹತ್ತರವಾಗಿದೆ ಎಂದರು. ಒಂಂದೊಂದು ಛಾಯಾಚಿತ್ರಕ್ಕೂ ಮನಸ್ಸನ್ನು ಸಂತಸಗೊಳಿಸುವ ಶಕ್ತಿ ಇದ್ದು, ಚಿತ್ರದಾಚೆಗಿನವರೆಗೂ ದೃಷ್ಟಿ ಹರಿಸಿ ಎಂದವರು ಸಲಹೆ ನೀಡಿದರು.
ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ನ್ಯಾಯವಾದಿ ಪ್ರಸಾದ್ ಕುಮಾರ್, ಇಂಜಿನಿಯರ್ ಉಮೇಶ್ ಭಟ್ ವೇದಿಕೆಯಲ್ಲಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ರಜತವರ್ಷಾಚರಣಾ ಸಮಿತಿ ಸಂಚಾಲಕ ವೆಂಕಟೇಶ್ ಬಂಟ್ವಾಳ್, ಛಾಯಾಗ್ರಾಹಕ ಕಿಶೋರ್ ಪೆರಾಜೆ, ರತ್ನದೇವ್ ಪೂಂಜಾಲಕಟ್ಟೆ , ಯಾದವ ಅಗ್ರಬೈಲು, ಸುಕುಮಾರ್ ಬಂಟ್ವಾಳ ಉಪಸ್ಥಿತರಿದ್ದರು. ರಾಣಿಅಬ್ಬಕ್ಕ ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ, ಕಾರ್ಯದರ್ಶಿ ಪ್ರೊ.ಆಶಾಲತಾ ಸುವರ್ಣ, ತುಳು ರಂಗಭೂಮಿ ಕಲಾವಿದರಾದ ಸುಂದರ್ ರೈ ಮಂದಾರ, ಎಚ್ಕೆ ನಯನಾಡು, ಬಂಟ್ವಾಳ ಎಸ್ಕೆಪಿಎ ಯ ಮಾಜಿ ಅಧ್ಯಕ್ಷರುಗಳಾದ ಹರೀಶ್ ರಾವ್, ಆನಂದ್ ಎನ್, ಶಿಕ್ಷಣ ಸಂಯೋಜಕಿ ಸುಜಾತಾ, ಪುರಸಭಾ ಸದಸ್ಯ ವಾಸುಪೂಜಾರಿ, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀನಾಬ್ರಿಟ್ಟೋ, ಆರೋಗ್ಯಾಧಿಕಾರಿ ರಾಜಶೇಖರ್ ಸಹಿತ ನ್ಯಾಯವಾದಿಗಳು, ಛಾಯಾಗ್ರಾಹಕರು ಸಹಿತ ಹಲವಾರು ಗಣ್ಯರು ಛಾಯಾಚಿತ್ರಪ್ರದರ್ಶನ ವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪೆ.13ರಂದು ಕಾರ್ಯಾಗಾರ
ರಜತನಡೆಯಲ್ಲೊಂದು ಛಾಯಾಕಿರಣ ಕಿಶೋರ್ ಪೆರಾಜೆಯವರ ಛಾಯಾಚಿತ್ರಗಳ ಪ್ರದರ್ಶನದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಫೊಟೋಗ್ರಫಿ ಕುರಿತ ಕಾರ್ಯಾಗಾರ ಶನಿವಾರ ಬೆಳಿಗ್ಗೆ 10 ಗಂಟೆಗೆ ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ನಡೆಯಲಿದೆ. ಟೈಮ್ಸ್ ಆಫ್ ಇಂಡಿಯಾದ ಛಾಯಾಗ್ರಾಹಕ ರವಿಪೊಸವಣಿಕೆ ಯವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಡುವರು. ಆಸಕ್ತರು ಭಾಗವಹಿಸಬಹುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.


