ಬಜಪೆ:ಸಾಮಾಜಿಕವಾಗಿ ಟೈಲರ್ಸ್ ನವರು ಕೂಡಾ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮಾಜದ ಕುಂದು ಕೊರತೆಗಳ ಬಗ್ಗೆ ಪರಿವರ್ತನೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿಬೇಕು. ಮಕ್ಕಳಿಗೆ ಉತ್ತಮ ಶೈಕ್ಷಣಿಕ ಹಾಗೂ ಬದುಕಿಗೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಅಲ್ಲದೆ ಸ್ವಾಸ್ಥ್ಯದ ಬಗೆಗೆ ಕಾಳಜಿ ರೂಢಿಸಬೇಕು.

ಎಂದು ಭಾರತಿಯ ವೈದ್ಯಕೀಯ ಸಂಘ ಮಂಗಳೂರು ಘಟಕದ ಪ್ರಮುಖರಾದ ಡಾ|ರಾಮಚಂದ್ರ ಭಟ್ ಅವರು ಹೇಳಿದರು.
ಅವರು ಭಾನುವಾರ ಬಜಪೆ ನಾರಾಯಣಗುರು ಸಭಾಗೃಹದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಮಂಗಳೂರು ಕ್ಷೇತ್ರ ಹಾಗೂ ಬಜಪೆ ವಲಯದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಇದೇ ಸಂದರ್ಭ ಡಾ| ರಾಮಚಂದ್ರ ಭಟ್, ಡಾ|ನಾರಾಯಣ್ ಹಾಗೂ ಬ್ಲಡ್ ಬ್ಯಾಂಕ್ನ ಡಾ| ಎಡ್ವರ್ಡ್ ಅವರ ನೇತ್ರತ್ವದಲ್ಲಿ ಆರೋಗ್ಯ ಮಾಹಿತಿ ಹಾಗೂ ರಕ್ತದೊತ್ತಡ ಹಾಗೂ ಮದುಮೇಹ ಕುರಿತು ಉಚಿತ ಆರೋಗ್ಯ ತಪಾಸಣೆ ಜರಗಿತು.
ಬಜಪೆ ವಲಯ ಟೈಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಶಿವಾನಂದ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ಧರು. ಕೆ.ಎಸ್.ಟಿ.ಎ ರಾಜ್ಯಾಧ್ಯಕ್ಷ ವಸಂತ ಬಿ, ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ ಇದರ ಸದಸ್ಯ ಪ್ರವೀಣ್ ಸಾಲ್ಯಾನ್, ಕೆಎಸ್ಟಿಎ ರಾಜ್ಯ ಸಮಿತಿ ಉಪಾಧ್ಯಾಕ್ಷೆ ವಿದ್ಯಾ ಶೆಟ್ಟಿ, ಜಿಲ್ಲಾಧ್ಯಕ್ಷ, ಉದಯ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಶಂಕರ್, ಪದಾಕಾರಿಗಳಾದ ಜಯ ಕೋಟ್ಯಾನ್, ಸುಜಾತಾ ಜೋಗಿ, ಶೇಖರ ಪಡು, ಪುಷ್ಪ ಕರ್ಕೇರ, ಬಜಪೆ ವಲಯದ ಮಾಜಿ ಅಧ್ಯಕ್ಷ ಜಯ ಪೂಜಾರಿ, ಹಿರಿಯರಾದ ವಿಠಲ ನಾಯಕ್, ಪ್ರಜ್ವಲ್, ಮುತಾಲಿಕ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ಧರು.
ಶಿವಾನಂದ್ ಸ್ವಾಗತಿಸಿ, ಮೀನಾಕ್ಷಿ ವರದಿ ಮಂಡಿಸಿದರು. ಉಷಾ ಶಿವಾನಂದ್ ವಂದಿಸಿದರು. ಲೋಕನಾಥ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸುಂಕದಕಟ್ಟೆ ಶ್ರೇಯಾ ಎಸ್., ಶ್ರಾವ್ಯ ಎಸ್. ಅವಳಿ ಸೋದರಿಯರಿಂದ ನೃತ್ಯ ಕರ್ಯಕ್ರಮ ಜರಗಿತು.
