ಕೈಕಂಬ: ದುರ್ಗಾವಾಹಿನಿಯ ಕಾರ್ಯಕರ್ತ ಯುವತಿಯರು ಹಾಡಿದ ಸುಶ್ರ್ಯಾವ್ಯ ಹನುಮಾನ್ ಚಾಲೀಸ್ಗೆ ಇಡೀ ಸಭೆಯೇ ಮಂತ್ರ ಮುಗ್ಧಗೊಂಡ ಘಟನೆ ಕಾಜಿಲದಲ್ಲಿ ಶನಿವಾರ ರಾತ್ರಿ ನಡೆದ ಬಜರಂಗಿ ಉತ್ಸವದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಸಭೀಕರನ್ನು ಆಹ್ವಾನಿಸಿದ ಬಳಿಕ ಸುಪ್ರೀತಾ ಹಾಗೂ ಆಕೆಯ ತಂಡದವರು ವೇದಿಕೆ ಏರಿ ಹನುಮಾನ್ ಚಾಲೀಸ್ ಹಾಡತೊಡಗಿದರು. ಸುಶ್ರಾವ್ಯ ಹಾಡಿಗೆ ಮನಸೋತ ಗಣ್ಯರು ಹಾಗೂ ಸಭೀಕರು ಸುಮಾರು ಐದು ನಿಮಿಷದ ಹಾಡಿಗೆ ಮಂತ್ರಮುಗ್ಧಗೊಂಡು ಗಾನಲೋಕದಲ್ಲಿ ತೇಲಾಡಲಾರಂಭಿಸಿದರು.
ಶಾಸ್ತ್ರೀಯವಾಗಿ ಸಂಗೀತ ಕಲಿಯದೆ ಹಾಡನ್ನು ಅಭ್ಯಸಿಸಿ, ಯಾವುದೇ ಏರಿತವಿಳ್ಳದೆ ತಾಳಕ್ಕೆ ತಕ್ಕಂತೆ ಹಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಹಾಡುಹಾಡುತ್ತಿದ್ದಂತೆ ಸಭೀಕರು ಹಾಗೂ ವೇದಿಕೆಯಲ್ಲಿದ್ದರು ತನ್ನನ್ನು ತಾನು ಮರೆತಂತೆ ತಾನೂ ಧ್ವನಿಗೂಡಿಸಿರುವುದು ವಿಶೇಷವಾಗಿತ್ತು. ದುರ್ಗಾವಾಹಿನಿ ಸದಸ್ಯೆಯರು ಇದೇ ರೀತಿ ಹಲವು ರೀತಿಯ ಭರತನಾಟ್ಯ, ಸಂಗೀತ, ಗಾಯ ಇತ್ಯಾದಿ ಕಾರ್ಯಕ್ರಮವನ್ನು ನಡೆಸಿಕೊಟ್ಟು ಕಾರ್ಯಕ್ರಮಕ್ಕೆ ಹೊಸಮೆರುಗನ್ನು ನೀಡಿದರು.




