ಕೈಕಂಬ: ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ, ಅಂಗವಿಕಲರ ಕಲ್ಯಾಣ ಸಂಸ್ಥೆ, ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ, ಮಂಗಳಜ್ಯೋತಿ ಸಮಗ್ರ ಶಾಲೆ ಚೈಲ್ಡ್ ಫಂಡ್ ಇಂಟರ್ ನ್ಯಾಷನಲ್ ಯು. ಎಸ್.ಎ. ಇದರ ಆಶ್ರಯದಲ್ಲಿ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಸ್ಮರಣಾರ್ಥ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗಾಗಿ ಸಾಂಸ್ಕೃತಿಕ ಸ್ಪರ್ಧಾ ಕಲೋತ್ಸವದ ದಶಮಾನೋತ್ಸವ ದ ಉಧ್ಘಾಟನಾ ಕಾರ್ಯಕ್ರಮವು ಜರಗಿತು. 

ಉಧ್ಘಾಟನೆಯನ್ನು ನೆರವೇರಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಾ ವಿಭಿನ್ನ ಸಾಮರ್ಥ್ಯದ ಮಕ್ಕಳನ್ನು ಶಾಪ, ಪೂರ್ವಜನ್ಮದ ಫಲ ಎಂದು ತಿಳಿಯಬಾರದು, ಅವರಲ್ಲಿರುವ ವಿಭಿನ್ನವಾದ ಪ್ರತಿಭೆಯನ್ನು ಹೊರತರಲು ಅವಕಾಶ ಮಾಡಿಕೊಡಬೇಕು. ಆಧುನಿಕ ವಿಜ್ಞಾನದ ಮೂಲಕ ಅಂಗವಿಕಲತೆಗೆ ಸರಿಯಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಾಂಗ್ಯೋ ಐಸ್ ಕ್ರೀಮ್ಸ್ ಇದರ ಆಡಳಿತ ನಿರ್ದೇಶಕರಾದ ಪ್ರದೀಪ್ ಜಿ ಪೈ ಅವರು ಮಾತನಾಡಿ ಕಲೋತ್ಸವದಂತಹ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಹಾಕುವುದಕ್ಕೆ ಸೂಕ್ತ ವೇದಿಕೆಯನ್ನು ಒದಗಿಸಿಕೊಟ್ಟ ಇಂತಹ ಕಾರ್ಯ ಶ್ಲಾಘನೀಯ ಎಂದು ನುಡಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ಅನ್ನಪೂರ್ಣ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಇವರು ಸರಕಾರದಿಂದ ಅಂಗವಿಕಲರಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿಶೇಷ ಶಾಲೆಗಳನ್ನು ಡಾ ಡಿ ವೀರೇಂದ್ರ ಹೆಗ್ಗಡೆಯವರು ಗೌರವಿಸಿದರು. ಸೈಂಟ್ ಆಗ್ನೆಸ್ಸ್ ವಿಶೇಷ ಶಾಲೆಯ ಸಿಸ್ಟರ್ ಮರಿಯಾ, ಆಶಾ ನಿಲಯದ ಆ್ಯಗ್ನೆಸ್ ಕುಂದರ್, ಲಯನ್ಸ್ ವಿಶೇಷ ಶಾಲೆಯ ಮೀರಾ ಸತೀಶ್, ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಪಾಂಬೂರು ನ ಸಿಸ್ಟರ್ ತೆಲ್ಮಾ, ಕ್ರಿಸ್ತರಾಜ ನವಚೇತನ ವಿಶೇಷ ಶಾಲೆಯ ಸಿಸ್ಟರ್ ಫ್ಲಾವಿಯಾ, ವಾಗ್ಜೋತಿ ಶ್ರವಣದೋಷ ಮಕ್ಕಳ ವಸತಿ ಶಾಲೆ ಉಡುಪಿ ಯ ರವೀಂದ್ರ ಹೆಚ್, ಸಾನ್ನಿದ್ಧ್ಯ ವಸತಿ ಶಾಲೆ ಮತ್ತು ತರಬೇತಿ ಸಂಸ್ಥೆ ಯ ಮೀನಾಕ್ಷೀ ಎಂ.ಕೆ, ಚೇತನಾ ವಿಶೇಷ ಶಾಲೆ ಕಾರ್ಕಳದ ಕಾಂತೀ ಹರೀಶ್, ಚೇತನಾ ಬಾಲ ವಿಕಾಸ ಕೇಂದ್ರ ದ ವಿನೋದ್ ಶೆಣೈ, ಮೋಹಿನೀ ಅಪ್ಪಾಜೀ ನಾಯ್ಕ್ ಸ್ಮಾರಕ ಆಳ್ವಾಸ್ ವಿಶೇಷ ಶಾಲೆ ಯ ಅನಿತಾ ರೋಡ್ರಿಗಸ್, ರೋಮನ್ ಕ್ಯಾಥರೀನ್ ಲೋಬೋ ಅಂಧ ಮಕ್ಕಳ ಶಾಲೆಯ ಕ್ಯಾಲಿಸ್ಟಸ್ ಡಿ ಸೋಜಾ ಮತ್ತು ಆಸರೆ ಬುದ್ಧಿಮಾಂದ್ಯರ ವಸತಿ ಶಾಲೆ ಹಾಗೂ ಪುನರ್ವಸತಿ ಕೇಂದ್ರ ದ ಕೆ ಎಸ್ ಜೈ ವಿಠಲ್ ಇವರು ಗೌರವವನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಂಗಳಜ್ಯೋತಿ ಸಮಗ್ರ ಶಾಲೆ ಚೈಲ್ಡ್ ಫಂಡ್ ಇಂಟರ್ ನ್ಯಾಷನಲ್ ಯು. ಎಸ್.ಎ. ಕೊಡಮಾಡಿದ ಆಧುನಿಕ ಶ್ರವಣೋಪಕರಣಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಗಳಾದ ಪ್ರೋ ಎ ರಾಜೇಂದ್ರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದರು. ಚೈಲ್ಡ್ ಫಂಡ್ ವಿಭಾಗದ ಯೋಜನಾಧಿಕಾರಿ ಪುನೀತ್ ಡಿ, ಐಟಿಐ ವಿಭಾಗದ ಮುಖ್ಯಸ್ಥರಾದ ನರೇಂದ್ರ, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಮಾರ್ಯೆಟ್ ಮಸ್ಕರೇನ್ಹಸ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಗಣೆಶ್ ಭಟ್ ವಿ ಇವರು ಪ್ರಾಸ್ತಾವಿಕ ನುಡಿಗಳೋಂದಿಗೆ ಸ್ವಾಗತಿಸಿ, ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ಅಶೋಕ್ ಕುಮಾರ್ ಇವರು ವಂದಿಸಿ ರಮೇಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.
ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ವಿಶೇಷ ಸಾಮರ್ಥ್ಯದ ಹಳೆ ವಿದ್ಯಾರ್ಥಿಗಳಾದ, ಪ್ರಸ್ತುತ ಮಹಾಲಸಾ ಸ್ಕೂಲ್ ಆಫ್ ಆರ್ಟ್ ನಲ್ಲಿ ಚಿತ್ರಕಲೆಯನ್ನು ಅಭ್ಯಸಿಸುತ್ತಿರುವ ಪ್ರಜ್ವಲ್ ಹಾಗೂ ರಾಕೇಶ್ ಇವರ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಟ್ರೋಪಿ ಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ : ವಾಗ್ಜೋತಿ ಶ್ರವಣದೋಶವುಳ್ಳ ಮಕ್ಕಳ ವಸತಿ ಶಾಲೆ, ಅಂಪಾರು, ಉಡುಪಿ, ದ್ವಿತೀಯ : ಸಾನ್ನಿಧ್ಯ ವಸತಿ ಶಾಲೆ ಮತ್ತು ತರಬೇತಿ ಸಂಸ್ಥೆ ಮಂಗಳೂರು ಹಾಗೂ ತ್ರತೀಯ : ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯ ಮಂಗಳೂರು ಬಹುಮಾನಗಳನ್ನು ಪಡೆದರು.
ಸಂಗೀತ ಸ್ಪರ್ಧೆ ಪ್ರಥಮ :ರಾಕೇಶ್, ರೋಮನ್ ಕ್ಯಾಥರೀನ್ ಲೋಬೋ ಅಂಧ ಮಕ್ಕಳ ಶಾಲೆ, ಮಂಗಳೂರು, ದ್ವಿತೀಯ: ಶರೂನ್, ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಪಾಂಬೂರು, ಉಡುಪಿ, ತ್ರತೀಯ: ಶಿವಾನಂದ, ಚೇತನಾ ವಿಶೇಷ ಶಾಲೆ ಕಾರ್ಕಳ
ಛದ್ಮವೇಷ ಸ್ಪರ್ಧೆ : ಪ್ರಥಮ: ದೀಪಾ, ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಪಾಂಬೂರು, ಉಡುಪಿ, ದ್ವಿತೀಯ: ಹರೀಶ್ ಭಟ್, ಸಾನ್ನಿಧ್ಯ ವಸತಿ ಶಾಲೆ ಮತ್ತು ತರಬೇತಿ ಸಂಸ್ಥೆ ಮಂಗಳೂರು, ತ್ರ ತೀಯ :ರಾಕೇಶ್ ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆ ಮಂಗಳೂರು
ಚಿತ್ರಕಲೆ ಸ್ಪರ್ಧೆ , ಪ್ರಥಮ: ಸಾಯಿರಾಂ, ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ, ಪಾಂಬೂರು, ಉಡುಪಿ, ದ್ವಿತೀಯ: ಶರತ್ ಅರ್ ವಾಗ್ಜೋತಿ ಶ್ರವಣದೋಶವುಳ್ಳ ಮಕ್ಕಳ ವಸತಿ ಶಾಲೆ, ಅಂಪಾರು, ಉಡುಪಿ, ತೃತೀಯ: ಸನತ್,ಚೇತನಾ ವಿಶೇಷ ಶಾಲೆ,ಕಾರ್ಕಳ.
ಒಟ್ಟು ವಿಶೇಷ ಸಾಮರ್ಥ್ಯದ ಶಾಲೆಗಳ ಒಟ್ಟು 250 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














