ಕೈಕಂಬ:ಮಂಗಳೂರು ತಾಲೂಕಿನ ಕಂದಾವಾರ ಗ್ರಾಮದ ಬಾಳಿಗರ ಮನೆಯ ವಿ ಟಿ ಚೌಟ (89 ವ ) ಅವರು ಫೆ.4 ರಂದು ತನ್ನ ಸ್ವಗ್ರಹದಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗು ಇಬ್ಬರು ಗಂಡು ಮಕ್ಕಳು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಅವರು ಹಲಾವಾರು ವರ್ಷಗಳಿಂದ ಮುಂಬಯಿಯ ಶಿವಾಜಿಬಾಗ್ ನಲ್ಲಿ ರಾಜರಾಜೇಶ್ವರೀ ಹೋಟೇಲ್ ಉದ್ಯಮವನ್ನು ನಡೆಸಿಕೊಂಡಿದ್ದರು. ಸುಮಾರು ವರ್ಷದ ಹಿಂದೆ ಮುಂಬಯಿಯಿಂದ ಊರಿಗೆ ಬಂದು ಕೈಕಂಬದಲ್ಲಿ ವಿಶ್ವರೂಪ ಸೌದದಲ್ಲಿ ಹೋಟೇಲ್ ದೇವಲೋಕ ಎಂಬ ಹೋಟೆಲ್ ನಲ್ಲಿ ವ್ಯಾಪಾರ ನಡೆಸುತ್ತಿದ್ದರು.
