ಬಜ್ಪೆ: ಎರಡೂ ಕಿಡ್ನಿಗಳನ್ನು ಕಳೆದುಕೊಂಡಿರುವ ವ್ಯಕ್ತಿಯೋರ್ವರು ದಾನಿಗಳಿಂದ ಪಡೆದ ಕಿಡ್ನಿಯನ್ನು ಮರುಜೋಡಿಸಲು ಹಣದ ಸಹಾಯ ಬೇಡುತ್ತಿದ್ದಾರೆ. ಬಜ್ಪೆ ಸಮೀಪದ ಮೂಡುಪೆರಾರ ಗ್ರಾಮದ ಮಟ್ಟಿಕಲ್ಲು ನಿವಾಸಿ ಗೋಪಾಲ ದೇವಾಡಿಗ (37) ದಾನಿಗಳಿಂದ ಹಣದ ನೆರವು ಬೇಡುತ್ತಿರುವ ನತದೃಷ್ಟ ವ್ಯಕ್ತಿ.
ಕೂಲಿಕೆಲಸ ಮಾಡಿಕೊಂಡು, ಪತ್ನಿ ಹಾಗೂ ತನ್ನ ಒಂದೂವರೆ ವರ್ಷ ಪ್ರಾಯದ ಚಿಕ್ಕ ಮಗುವಿನೊಂದಿಗೆ ನೆಮ್ಮದಿಯಿಂದ ಬದುಕುತ್ತಿದ್ದ ಗೋಪಾಲ ದೇವಾಡಿಗ ಅವರ ಎರಡೂ ಕಿಡ್ನಿಗಳು ವಿಫಲವಾಗಿವೆ. ಮಂಗಳೂರಿನ ಏನಪೋಯ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆದುಕೊಳ್ಳುತ್ತಿರುವ ಇವರಿಗೆ ಪ್ರತೀ ತಿಂಗಳು ಡಯಾಲಿಸ್ ಹಾಗೂ ಇತರ ವೈದ್ಯಕೀಯ ಖರ್ಚು ವೆಚ್ಚಗಳಿಗೆ 35ರಿಂದ 40 ಸಾವಿರ ರೂ. ಹಣ ಖರ್ಚಾಗುತ್ತಿದೆ. ಇದಕ್ಕಾಗಿ ಸಾಕಷ್ಟು ವೆಚ್ಛ ಮಾಡಿಕೊಂಡು ಸಾಲದಲ್ಲಿ ಸಿಲುಕಿಕೊಂಡಿರುವ ಗೋಪಾಲ ದೇವಾಡಿಗ ಅವರು ಮುಂದಿನ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್ಗೆ
ಬೇಕಿದೆ ಅಂದಾಜು 8 ಲಕ್ಷ ರೂ:
ಗೋಪಾಲ ದೇವಾಡಿಗ ಅವರು ದಾನಿಗಳಿಂದ ಪಡೆದ ಕಿಡ್ನಿಯನ್ನು ಅಳವಡಿಸಿಲು(ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್) ಇಚ್ಛಿಸಿದ್ದು, ಅದಕ್ಕಾಗಿ 5ರಿಂದ 8 ಲಕ್ಷ ರೂ.ಗಳ ಹಣದ ಅವಶ್ಯಕತೆ ಇದೆ ಎಂದು ಇವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಬಡವರಾಗಿರುವ ಗೋಪಾಲ ಅವರಿಗೆ ಅಷ್ಟೊಂದು ಹಣ ಹೊಂದಿಸಲು ಕಷ್ಟವಾಗುತ್ತಿದ್ದು, ಸಹೃದಯಿ ಓದುಗರ ಮುಂದೆ ಕೈಯ್ಯೊಡ್ಡುತ್ತಿದ್ದಾರೆ. ಸಹೃದಯಿಗಳು ತನ್ನಿಂದಾದ ಧನಸಹಾಯ ನೀಡಿದರೆ ಗೋಪಾಲ ದೇವಾಡಿಗ ಅವರು ತನ್ನ ಕುಟುಂಬದೊಂದಿಗೆ ನೆಮದಿಯ ಜೀವನ ನಡೆಸಲು ಸಾಧ್ಯವಿದೆ.
ಸಹಾಯ ಮಾಡಲಿಚ್ಛಿಸುವ ದಾನಿಗಳು
ಹೆಸರು: ಗೋಪಾಲ ದೇವಾಡಿಗ
ಬ್ಯಾಂಕ್: ಸಿಂಡಿಕೇಟ್ ಬ್ಯಾಂಕ್
ಶಾಖೆ: ಕೈಕಂಬ
ಖಾತೆ ಸಂಖ್ಯೆ: 01512200061806
ಐಎಫ್ಎಸ್ಸಿ ಕೋಡ್: ಎಸ್ವೈಎನ್ಬಿ0000151
ದೂರವಾಣಿ: 9964317876
ಇದನ್ನು ಸಂಪರ್ಕಿಸಬಹುದು
