ಬಂಟ್ವಾಳ : ಪೊಲೀಸ್ ಇಲಾಖೆ ಜನಸ್ನೇಹಿಯಾಗಿರಬೇಕು, ಆ ಮೂಲಕ ಸಾಮಾಜಿಕ ಶಾಂತಿ-ಸುವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯ ಎಂಬುದು ಸರಕಾರದ ಆಶಯ, ಬಂಟ್ವಾಳ ಪೊಲೀಸ್ ಉಪವಿಭಾಗದಲ್ಲಿ ರಾಹುಲ್ ಕುಮಾರ್ ಅವರು ಇದನ್ನು ಸಾಧಿಸಿ ತೋರಿಸಿದ್ದಾರೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಹೇಳಿದ್ದಾರೆ.
asp

5

3

4

ಬಂಟ್ವಾಳ ಪೊಲೀಸ್ ವಿಭಾಗದಿಂದ ಬೆಂಗಳೂರಿಗೆ ಎಸ್‍ಪಿ ಯಾಗಿ ಪದೋನ್ನತಿಗೊಂಡು ವರ್ಗಾವಣೆಗೊಂಡ ರಾಹುಲ್ ಕುಮಾರ್ ಅವರ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪೊಲೀಸ್ ಅಧಿಕಾರಿಯಾಗಿದ್ದುಕೊಂಡು ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡಲ್ಲಿ, ಅವರು ನಡೆಸುವ ಕಾರ್ಯದಲ್ಲಿಯೂ ಯಶಸ್ಸು ಕಾಣಲು ಸಾಧ್ಯ ಎಂದರು. ರಾಹುಲ್ ಕುಮಾರ್ ಅವರ ಕಾರ್ಯವೈಖರಿ ಇತರರಿಗೂ ಮಾದರಿಯಾಗಿದ್ದು, ಇವರು ಮತ್ತೆ ದ.ಕ.ಜಿಲ್ಲೆಗೆ ಎಸ್ಪಿ ಯಾಗಿ ಬರಲಿ ಎಂದವರು ಆಶಯ ವ್ಯಕ್ತಪಡಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತ ಕುಮಾರ್, ಪುತ್ತೂರು ಎಎಸ್ಪಿ ರಿಷ್ಯಂತ್, ಡಿವೈಎಸ್‍ಪಿ ಬಾಸ್ಕರ್ ರೈ, ಉಪಸ್ಥಿತರಿದ್ದರು,

By Suddi9

Leave a Reply

Your email address will not be published. Required fields are marked *