ವಿಟ್ಲ: ಕಡ್ಡಾಯ ತಲೆಕವಚ ಇಲ್ಲವಾದರೆ ದಂಡ ಎಂಬ ಕಾನೂನು ಜಾರಿಗೆತರಲು ಮುಂದಾದ ಪೊಲೀಸರೇ ಸೋಮವಾರ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ಘಟನೆ ಸೋಮವಾರ ವಿಟ್ಲ ನಾಲ್ಕು ಮಾರ್ಗಜಂಕ್ಷನ್ನಲ್ಲಿ ನಡೆದಿದೆ.
ತಲೆಕವಚ ಕಡ್ಡಾಯ ಕಾನೂನು ಜಾರಿಗೆತರುವ ಬರಾಟಯಲ್ಲಿ ವಿಟ್ಲ ಪೊಲೀಸ್ಠಾಣೆಯ ವಾಹನ ಮಾತ್ರ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರು ಹೊರಡಿಸಿದ ವಾಹನ ನಿಲುಗಡೆ ನಿಷೇಧಿತ ನಾಲ್ಕು ಮಾರ್ಗಜಂಕ್ಷನ್ನಲ್ಲೇ ನಿಂತಿತ್ತು. ಬೈಕ್ ಸವಾರ ತಲೆಕವಚ ಇಲ್ಲದೆ ಬರುತ್ತಿದ್ದಂತೆ ಅಲ್ಲೇ ನಿಲ್ಲಿಸಿ ದಂಡ ವಿಧಿಸಲು ಮುಂದಾದರಿಂದ ಬೇರೆ ವಾಹನ ಸಂಚಾರಕ್ಕೆತೊಂದರೆಯಾದ್ದೂ ಅಲ್ಲದೆ ವಿಟ್ಲದಲ್ಲಿ ವಾಹನ ಬ್ಲಾಕ್ ಸಂಭವಿಸಿತ್ತು.
ನಿಮ್ಮ ವಾಹನ ನಿಲ್ಲಿಸಿಯೇ ಬ್ಲಾಕ್ ಸಂಬವಿಸುತ್ತಿದೆ ಬೇರೆಕಡೆ ವಾಹನ ನಿಲ್ಲಿಸಿ ನಾಲ್ಕು ಮಾರ್ಗದಲ್ಲಿಕಾರ್ಯಾಚರಣೆ ಮಾತ್ರ ಮಾಡಬಹುದಲ್ಲವೇಎಂದು ಪ್ರಶ್ನಿಸಿದ್ದಕ್ಕೆ ಸರ್ಕಾರಿ ವಾಹನಗಳಾದ ಪೊಲೀಸ್, ಆಗ್ನಿಶಾಮಕ ದಳ, ಆಂಬ್ಯುಲೆನ್ಸ್ ವಾಹನ ಎಲ್ಲಿಬೇಕಾದರೂ ನಿಲ್ಲಿಸಬಹುದೆಂಬ ಉಪದೇಶ ಅಧಿಕಾರಿಗಳಿಂದ ಬರುತ್ತಿತ್ತು.ಕಾನೂನು ಪಾಲಿಸಬೇಕಾದ ಮಂದಿಯೇ ಕಾನೂನು ಉಲ್ಲಂಘಿಸಿ ಬೈಕ್ ಸವಾರರಿಗೆದಂಡ ವಿಧಿಸುತ್ತಿದ್ದುದು ಸಾರ್ವಜನಿಕರಆಕ್ರೋಶಕ್ಕೆಕಾರಣವಾಯಿತು.
ಹೆಲ್ಮೆಟ್ಅಂಗಡಿಯಲ್ಲಿರಷ್:
ತಲೆಕವಚಧರಿಸದ ಸವಾರರ ಮೇಲೆ ಪೊಲೀಸ್ ಇಲಾಖೆ ದಂಡ ಪ್ರಯೋಗ ಮಾಡುತ್ತಿದೆ ಎಂಬ ಸುದ್ದಿ ಕೇಳುತ್ತಿದ್ದಂತೆ ಹಾಗೂ ದಂಡಕ್ಕೊಳಗಾದ ಸವಾರರು ರಸ್ತೆ ಬದಿಯಲ್ಲಿ ಕಡಿಮೆಗೆ ಸಿಗುವ ತಲೆಕವಚ ಅಂಗಡಿಗಳ ಮುಂದೆ ಸಾಲು ನಿಂತುಕರೀದಿಸುತ್ತಿದ್ದರು.ಸರಿಯಾದ ತಲೆಕವಚದರಿಸದೆ ನಕಲಿ ಐಎಸ್ಐ ಗುರುತು ಹೊಂದಿದ್ದ ತಲೆಕವಚಗಳನ್ನು ಸಮಾರರು ಹೇಳಿದ ಹಣಕ್ಕೆ ಖರೀಧಿಸುತ್ತಿದ್ದ ದೃಶ್ಯ ಕಾಣಿಸುತ್ತಿತ್ತು.

