ಬಂಟ್ವಾಳ: ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಕೊಲ್ಪೆದಬೈಲು ಗೇರುಬೀಜ ಫ್ಯಾಕ್ಟರಿಯ ಮಾಲಕರಿಗೆ 16.11 ಲ.ರೂ.ವಂಚಿಸಿದ ಪ್ರಕರಣ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪುತ್ತೂರು ಎಸ್.ಎಂ.ಟ್ರೇಡಿಂಗ್‍ನ ಅಬ್ದುಲ್ ಹಮೀದ್ ಮತ್ತು ಉಮರ್ ಎಂಬವರು ಪ್ರಕರಣದ ಆರೋಪಿಗಳಾಗಿದ್ದಾರೆ. ಗೇರು ಬೀಜ ಫ್ಯಾಕ್ಟರಿಯ ಮಾಲಕ ಕೊಲ್ಪೆದ ಲು ನಿವಾಸಿ ಅಬ್ದುಲ್ ಹಮೀದ್ ಎಂಬವರಿಂದ ಗೇರು ಬೀಜವನ್ನು ಖರೀದಿಸಿ ಬಳಿಕ ಹಣ ನೀಡದೆ ವಂಚಿಸಿದ್ದಲ್ಲದೇ ಕೊಲೆ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೆÇಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *