ಬಂಟ್ವಾಳ: ಬೈಕೊಂದು ಪಾದಾಚಾರಿ ಮಹಿಳೆಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಜ.31ರಂದು ವಾಮದ ಪದವು ಸಮೀಪದ ಇರ್ವತ್ತೂರುಪದವಿನಲ್ಲಿ ಸಂಭವಿಸಿದೆ.
ಇಲ್ಲಿಗೆ ಸಮೀಪದ ಕೊರಂಟಬೆಟ್ಟುವಿನ ದಿ. ಭೋಜ ಪೂಜಾರಿ ಅವರ ಪತ್ನಿ ರಾಮಕ್ಕು (55) ಮೃ ತಪಟ್ಟವರು.ಅವರು ಮಧ್ಯಾಹ್ನ ಬಸ್ಸಿನಿಂದಿಳಿದು ಬಸ್‍ನ ಹಿಂಬದಿಯಿಂದ ರಸ್ತೆ ದಾಟುತ್ತಿರುವ ವೇಳೆ ಎದುರುಗಡೆಯಿಂದ ಬಂದ  ಬೈ ಕ್ ಢಿಕ್ಕಿ ಹೊಡೆದಿತ್ತು.ಢಿಕ್ಕಿಯ ತೀವ್ರತೆಗೆ ರಾಮಕ್ಕು ಅವರು ತೀವ್ರವಾಗಿ ಗಾಯಗೊಂಡಿದ್ದರು.ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತತ್‍ಕ್ಷಣ 108 ಆಂಬ್ಯುಲೆನ್ಸ್‍ನಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು.ಘಟನೆ ಕುರಿತು ಫೆ.1 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಮೃತರ ಪುತ್ರ ರಾಜೇಶ್ ಅವರು  ಬೈಕ್ ಸವಾರ ಇರ್ವತ್ತೂರು ಕಲ್ಲಡ್ಕದ ಅನಿಲ್ ಅವರ ಮೇಲೆ ದೂರು ನೀಡಿದ್ದು  ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *