ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ವಿಭಾಗ ಹ್ಯಾಂಡ್ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡವು ಟ್ರೋಫಿ ಗೆದ್ದುಕೊಂಡಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಯಪ್ರಕಾಶ್ ಶೆಟ್ಟಿ ಬುಳೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ ಶೆಟ್ಟಿ, ಮಾಜಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಪ್ರಾಧ್ಯಾಪಕ ಪ್ರೊ.ಹರಿಪ್ರಸಾದ್ ಬಿ.ಶೆಟ್ಟಿ , ಅಮ್ಮು ರೈ ಹರ್ಕಾಡಿ, ಜಿ.ಶ್ರೀಧರ ಪೈ, ದೈಹಿಕ ಶಿಕ್ಷಕ ರಾಧಾಕೃಷ್ಣ ಎಚ್.ಬಿ., ಹರಿದಾಸ ಕೂಳೂರು, ಪುತ್ತುಮೋನು ಮತ್ತಿತರರು ಇದ್ದಾರೆ.
