ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಫೆ.20ರಂದು ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಫೆ.1ರಿಂದ 8ರತನಕ ಪ್ರತಿದಿನ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 3ಗಂಟೆತನಕ ನಾಮಪತ್ರ ಸ್ವೀಕರಿಸಲು ನಾಲ್ವರು ಚುನಾವಣಾಧಿಕಾರಿ ನೇಮಕಗೊಂಡಿದ್ದಾರೆ.
1.) ಮಂಗಳೂರು ಸಹಾಯಕ ಆಯುಕ್ತ ಡಾ.ಡಿ.ಆರ್.ಅಶೋಕ್ ಅವರು ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಲ್ಲಿನ ಸಂಗಬೆಟ್ಟು, ಸರಪಾಡಿ, ಪುದು, ಗೋಳ್ತಮಜಲು, ಮಾಣಿ, ಕೊಳ್ನಾಡು, ಕುರ್ನಾಡು, ಸಜಿಪಮುನ್ನೂರು, ಪುಣಚ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಮಪತ್ರ ಸ್ವೀಕರಿಸುವರು.
2.) ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ಪಿ.ಎಫ್.ಮಿರಾಂದ ಅವರು ಬಿ.ಸಿ.ರೋಡ್ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಇಲ್ಲಿನ ಸಂಗಬೆಟ್ಟು, ಚೆನ್ನೈತ್ತೋಡಿ, ಪಿಲಾತಬೆಟ್ಟು, ರಾಯಿ, ಪಂಜಿಕಲ್ಲು, ಅಮ್ಟಾಡಿ, ಕಾವಳಮೂಡೂರು, ಉಳಿ, ಸರಪಾಡಿ, ಕರಿಯಂಗಳ, ಅಮ್ಮುಂಜೆ, ತುಂಬೆ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಮಪತ್ರ ಸ್ವೀಕರಿಸುವರು.
3.) ಬಂಟ್ವಾಳ ಕೃಷಿ ಅಧಿಕಾರಿ ನಾರಾಯಣ ಶೆಟ್ಟಿ ಅವರು ಬಿ.ಸಿ.ರೋಡ್ ಸಾಮಥ್ರ್ಯ ಸೌಧ ಕಟ್ಟಡದಲ್ಲಿ ಇಲ್ಲಿನ ನರಿಕೊಂಬು, ಪುದು, ಸಜಿಪಮುನ್ನೂರು, ಕಡೇಶ್ವಾಲ್ಯ, ಬಾಳ್ತಿಲ, ವೀರಕಂಭ, ಸಜಿಪಮೂಡ, ಸಜಿಪಪಡು, ಗೋಳ್ತಮಜಲು, ಕುರ್ನಾಡು, ಬಾಳೆಪುಣಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಮಪತ್ರ ಸ್ವೀಕರಿಸುವರು.
4.) ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಅವರು ಬಿ.ಸಿ.ರೋಡ್ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲ್ಲಿನ ಮಂಚಿ, ಮಾಣಿ, ಕೆದಿಲ, ವಿಟ್ಲ ಪಡ್ನೂರು, ಇಡ್ಕಿದು, ಕೊಳ್ನಾಡು, ನರಿಂಗಾನ, ಕನ್ಯಾನ, ಕರೋಪಾಡಿ, ಪೆರುವಾಯಿ, ಪುಣಚ ತಾಲ್ಲೂಕು ಪಂಚಾಯಿತಿ ಕ್ಷೇತ್ರಲ್ಲೆ ಸಂಬಂಧಿಸಿದಂತೆ ನಾಮಪತ್ರ ಸ್ವೀಕರಿಸುವರು ಎಂದು ಉಪ ತಹಶೀಲ್ದಾರ್ ಪರಮೇಶ್ವರ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *