ಮುಂಬಯಿ: ಬೊರಿವಿಲಿ ಪೂರ್ವದಲ್ಲಿನ ದೇವುಲಪಾಡಾದಲ್ಲಿನ ತುಳುನಾಡಿನ ವೀರದೈವಗಳಾದ ಕೋಟಿ-ಚೆನ್ನಯ ಅವರನ್ನೊಳಗೊಂಡ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ಬ್ರಹ್ಮ
ಬೈದರ್ಕಳ ಗರಡಿಯಲ್ಲಿ ಇಂದಿಲ್ಲಿ ಸೋಮವಾರ ರಾತ್ರಿನಲ್ವತ್ತವೊಂದನೇ ವಾರ್ಷಿಕ ಬೈದರ್ಕಳ ನೇಮೋತ್ಸವ ಸಂಪ್ರದಾಯಿಕವಾಗಿ ಆಚರಿಸಲ್ಪಟ್ಟಿತು. ದೇವುಲಪಾಡ ಅಶ್ವತ್ತದಡಿ ಕ್ಷೇತ್ರದಲ್ಲಿ ನೆಲೆಯಾಗಿ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಮೆರೆಯುತ್ತಿರುವ ಗರಡಿಯಲ್ಲಿ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿ ಸಮಿತಿ ಅಧ್ಯಕ್ಷ ಶೇಖರ್ ಇಂದು ಸಾಲಿಯಾನ್ ಮುಂದಾಳುತ್ವದಲ್ಲಿ ನೆರವೇರಿಸಲ್ಪಟ್ಟ ಧಾರ್ಮಿಕ ಪುಣ್ಯಾಧಿ ನೇಮೋತ್ಸವದಲ್ಲಿ ಕಲಶ ಪ್ರತಿಷ್ಠೆ, ಅಗೆಲ ತಂಬಿಲ ದರ್ಶನ, ಕೋಲತದನಂತರನೇಮೋತ್ಸವ ನಂತರ ಬೈದರ್ಕಳದರ್ಶನ (ಆವೇಶ) ಕಾರ್ಯಕ್ರಮ ನೆರವೇರಿಸಲಾಯಿತು.

Baidarkala Borivili Nema-3

Baidarkala Borivili Nema-6

Baidarkala Borivili Nema-7

Baidarkala Borivili Nema-8

Baidarkala Borivili Nema-18

Baidarkala Borivili Nema-22

Baidarkala Borivili Nema-24

Baidarkala Borivili Nema-26

Baidarkala Borivili Nema-A2

Baidarkala Borivili Nema-B1

Baidarkala Borivili Nema-B2

Baidarkala Borivili Nema-B6

Baidarkala Borivili Nema-B7ವಿದ್ವಾನ್ ಪಿ.ಸುಕುಮಾರ್ ಭಟ್ ಬೈಕುಲಾ ಮತ್ತು ಪುರೋಹಿತರು ನೆರವೇರಿಸಿ ಗಂಧ-ಪ್ರಸಾದವನ್ನೀಡಿ ನೆರೆದ ಭಕ್ತಾಭಿಮಾನಿಗಳನ್ನು ಹರಸಿದರು. ಪ್ರಸಾದ್ ಕಲ್ಯಾದೇವಿಪಾತ್ರಿಯಾಗಿ,ನರ್ಸಪ್ಪ ಕೆ.ಮಾರ್ನಾಡ್ ಮಧ್ಯಾಸ್ಥರಾಗಿ, ಕಿದಿಯೂ ರು ಗರಡಿಯ ಹರಿ ಪೂಜಾರಿ, ಪಕ್ಕಿಬೆಟ್ಟು ಗರಡಿ ಶಂಕರ್ ಪೂಜಾರಿ, ಬೈದರ್ಕಳರ ಪೂಜಾರಿಗಳಾಗಿ ಹಾಗೂ ಬಾನಾಲು ಜಗ್ಗುಪರವ, ನರಸಿಂಹ ಪರವ ಮತ್ತು ಬೂಬಾ ಪರವ ದೈವಾಧಿ ಧಾರ್ಮಿಕ ಸೇವೆಯ ನೇಮೋತ್ಸವ ನಡೆಸಿದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ನಗರಸೇವಕ ಯೋಗೇಶ್ ಭೊಯಿರ್, ಶಿವಸೇನಾ ಶಾಖಾ ಪ್ರಮುಖ್ ಮನೋಹರ್ ದೇಸಾಯಿ, ಸೇರಿದಂತೆಸ್ಥಳಿಯ ಗಣ್ಯರನೇಕರು, ತುಳುನಾಡಿನ ಭಕ್ತಾಧಿಗಳು ಆಗಮಿಸಿ ಶ್ರೀ ಜಗಧೀಶ್ವರಿ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿ ಶ್ರೀ ಬ್ರಹ್ಮ ಬೈದರ್ಕಳರ ಕೃಪೆಗೆ ಪಾತ್ರರಾದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸೇವಾದಳವು ದಳಪತಿ ಗಣೇಶ್ ಕೆ.ಪೂಜಾರಿ ನೇತೃತ್ವದಲ್ಲಿ ಸೇವೆ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಜಯರಾಮ್ ಎಸ್.ಪೂಜಾರಿ ಮತ್ತು ಲಕ್ಷ್ಮಣ ಬಿ. ಬೆಳುವಾಯಿ, ಪಾರುಪತ್ಯಗಾರರಾದ ನರ್ಸಪ್ಪ ಕೆ.ಮಾರ್ನಾಡ್, ವಾಸು ಕೆ.ಪೂಜಾರಿ, ಆನಂದ ಜಿ.ಶೆಟ್ಟಿಹಾಗೂ ಸದಸ್ಯರಾದ ಸದಾಶಿವ ಡಿ.ಸಾಲ್ಯಾನ್, ಅಶೋಕ್ ಆರ್.ಸುವರ್ಣ, ಶ್ರೀನಿವಾಸ ಎಸ್.ಪೂಜಾರಿ, ಗಣೇಶ್ ಆರ್.ಸುವರ್ಣ, ರಾಘು ಎಂ.ಬಂಗೇರ, ರಮೇಶ್ ಡಿ.ಕೋಟ್ಯಾನ್ ಮಲ್ಲೂರು ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಗೌ| ಪ್ರ| ಕಾರ್ಯದರ್ಶಿ ದಯಾನಂದ್ ಪೂಜಾರಿ ವಾರಂಗಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಾಘು ಕೆ. ಕೋಟ್ಯಾನ್ ವಂದಿಸಿದರು.

By suddi9

Leave a Reply

Your email address will not be published. Required fields are marked *