‘ಸಂಘಟನೆಯಿಂದ ಸಾಮಾಜಿಕ ಶಕ್ತಿ’
ಬಂಟ್ವಾಳ: ಸಮಾಜದಲ್ಲಿ ಪ್ರತಿಯೊಂದು ಜಾತಿ ಮತ್ತು ಸಮುದಾಯಗಳು ಪರಸ್ಪರ ಸೌಹಾರ್ದತೆಯಿಂದ ಸಂಘಟಿತರಾದಾಗ ಮಾತ್ರ ಸಾಮಾಜಿಕ ಶಕ್ತಿಯಾಗಿ ರೂಪುಗೊಂಡು ಸಮಾಜದ ಒಟ್ಟು ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಸಿದ್ಧಕಟ್ಟೆ ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ ಸೋಮಯ ಹನೈನಡೆ ಹೇಳಿದ್ದಾರೆ.
26btl-Kulalತಾಲ್ಲೂಕಿನ ಸಂಗಬೆಟ್ಟು-ಸಿದ್ಧಕಟ್ಟೆ ಕುಲಾಲ ಸುಧಾರಕ ಸಂಘದ ವತಿಯಿಂದ ಇಲ್ಲಿನ ಗಾಡಿಪಲ್ಕೆ ಮುಗೇರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಭೋಜ ಮೂಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಂಜಿಕಲ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ಪ ಕುಲಾಲ್, ಕೊಳ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಶಾರದಾ ಸುರೇಶ ಸಜಿಪಮುನ್ನೂರು ಮತ್ತಿತರರು ಶುಭ ಹಾರೈಸಿದರು.
ಸಂಘದ ಸ್ಥಾಪಕಾಧ್ಯಕ್ಷ ಸೋಮಯ್ಯ ಮೂಲ್ಯ, ಗೌರವಾಧ್ಯಕ್ಷ ಮೋಹನ ಜಿ.ಮೂಲ್ಯ ಮತ್ತಿತರರು ಇದ್ದರು. ಸಂಗಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯರಾದ ವಿಮಲಾ ಮೋಹನ ಮತ್ತು ಸುರೇಶ ಕೆ.ಕುಲಾಲ್ ಇವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಅರ್ಚಕ ಪ್ರಭಾಕರ ಐಗಳ್ ಪೌರೋಹಿತ್ಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಬಾಲ ಪ್ರತಿಭೆಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಸುನಿಲ್ ಸೂರ್ಯ ಸ್ವಾಗತಿಸಿ ಅರುಣ್ ಕುಮಾರ್ ವಾರ್ಷಿಕ ವರದಿ ವಾಚಿಸಿದರು. ರಮಾನಂದ ಕುದ್ಕೋಳಿ ಲೆಕ್ಕಪತ್ರ ಮಂಡಿಸಿದರು. ಪವನ್ ಕುಮಾರ್ ವಂದಿಸಿ, ಸಂತೋಷ್ ಸಿದ್ಧಕಟ್ಟೆ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *