ಅರಸೀಕೆರೆ: ತಮ್ಮ ಒಗಟಿನ ಮೂಲಕ ಮಾಮರ್ಿಕವಾಗಿ ಭವಿಷ್ಯ ನುಡಿಯುವ ಹಾರನಹಳ್ಳಿ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಫಲಿತಾಂಶಕ್ಕೆ ಮುನ್ನ ಮತ್ತೊಂದು ಭವಿಷ್ಯ ನುಡಿದಿದ್ದಾರೆ.

kd
ಕೇಂದ್ರದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ, ಯಾಕೆಂದರೆ ಮತಗಳು ವ್ಯಾಪಾರದ ವಸ್ತುವಾಗಿರುವುದೇ ಇದಕ್ಕೆ ಕಾರಣ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಏಪ್ರಿಲ್ ಮೊದಲ ವಾರ ಧಾರವಾಡದಲ್ಲಿ ನುಡಿದಿದ್ದ ಭವಿಷ್ಯವನ್ನು ಪುನರುಚ್ಚಿಸಿದ ಕೋಡಿಶ್ರೀಗಳು, ಕೇಂದ್ರದಲ್ಲಿ ಅಸ್ಥಿರ ಸರಕಾರ ಖಾಯಂ. ಯಾವಾಗ ಮತವನ್ನು ರಾಜಕೀಯ ಪಕ್ಷಗಳು ದುಡ್ಡು ಕೊಟ್ಟು ಖರೀದಿಸಲಾರಂಭಿಸಿದರೋ, ಅಂದೇ ಮತದಾನದ ಪಾವಿತ್ರ್ಯತೆ ಹೋಯಿತು ಎಂದಿದ್ದಾರೆ. ಈ ವರ್ಷ ನಡೆಯುವ ಚುನಾವಣೆಯಲ್ಲಿ ದೇಶ ಬಯಸುತ್ತಿರುವ ಬ್ರಹ್ಮಚಾರಿಯೊಬ್ಬರು ದೇಶದ ಪ್ರಧಾನಿ ಆಗುತ್ತಾರೆಂದು ಕೊಪ್ಪಳದ ಟಣಕನಕಲ್ ಮಠದ ಶರಣಬಸವಸ್ವಾಮಿ ಶರಣರು ಭವಿಷ್ಯವಾಣಿ ನುಡಿದಿದ್ದರು.
ಕಳೆದ ವರ್ಷವೇ ಇದನ್ನು ಹೇಳಿದ್ದೆ. ಈ ಬಾರಿ ಮತ್ತೆ ಅದೇ ಭವಿಷ್ಯವಾಣಿಯನ್ನು ನುಡಿಯುತ್ತಿದ್ದೇನೆಂದು ಶರಣರು ಸುರುಪುರದಲ್ಲಿ ನಡೆದ ಧಾಮರ್ಿಕ ಸಭೆಯೊಂದರಲ್ಲಿ ಭವಿಷ್ಯ ನುಡಿದ್ದರು

By suddi9

Leave a Reply

Your email address will not be published. Required fields are marked *