ಬಂಟ್ವಾಳ: ವಿಟ್ಲದ ವಿಠಲ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಕ್ರೀಡಾ ಭಾರತಿ ಮಂಗಳೂರು ಮತ್ತು ದ ಕ ಜಿ ದೈಹಿಕ ಶಿಕ್ಷಕರ ಸಂಘ ಇವರ ಆಶ್ರಯದಲ್ಲಿ ನಡೆದ ದ ಕ ಜಿಲ್ಲಾ ಕಿರಿಯರ ಒಲಿಂಪಿಕ್ಸ್ 2016 ರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಹಾಗೂ ಉಳ್ಳಾಲ ತೊಕ್ಕೊಟ್ಟುವಿನ ಕಾಪಿಕಾಡು ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡಮಿ (ರಿ) ಇಲ್ಲಿ ನಡೆದ ಕಬಡ್ಡಿ ಕ್ರೀಡೋತ್ಸವ 2016 ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಎರಡೂ ಪಂದ್ಯಾಟದಲ್ಲಿ ಮಹಮ್ಮದ್ ಸಾಕಿರ್ ಬೆಸ್ಟ್ ಆಲ್‍ರೌಂಡರ್ ಮತ್ತು ಮಣಿಕಂಠ ಆರ್ ಉಳ್ಳಾಲ ಪಂದ್ಯಾಟದಲ್ಲಿ ಬೆಸ್ಟ್ ಕ್ಯಾಚರ್ ಪ್ರಶಸ್ತಿ ಪಡೆದಿರುತ್ತಾರೆ.
