ಬಂಟ್ವಾಳ: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶನಿವಾರ ರಾತ್ರಿ ವಾರ್ಷಿಕ ಬ್ರಹ್ಮಬೈದರ್ಕಳ ಜಾತ್ರಾ ಮಹೋತ್ಸವ ಸಮಾಪನಗೊಂಡಿತು. 24btl-Bakimaru

ಆರಂಭದಲ್ಲಿ ಬ್ರಹ್ಮಬೈದರ್ಕಳರು ಒಲಿ ಮರೆಯಿಂದ ಹೊರಟು ಬಳಿಕ ವಿಶೇಷ ದರ್ಶನ ಸೇವೆ ನೀಡಿದ ಬಳಿಕ ಇಲ್ಲಿನ ವಿಶಾಲವಾದ ಬಾಕಿಮಾರು ಗದ್ದೆಗೆ ಇಳಿಯುವ ದೃಶ್ಯ ಆಕರ್ಷಕವಾಗಿತ್ತು. ಈ ಸಂದರ್ಭದಲ್ಲಿ ನೂರಾರು ಮಂದಿ ಭಕ್ತರು ಸಾಲಾಗಿ ಬಂದು ದೈವಗಳಿಗೆ ಹೂಹಾರ ಸಮರ್ಪಿಸಿದರು. ಈ ಬಾಕಿಮಾರು ಇಳಿಯುವ ದೃಶ್ಯ ವೀಕ್ಷಿಸಲು ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಮಂದಿ ಭಕ್ತರು ಪ್ರತೀ ವರ್ಷ ಬರುವುದು ಇಲ್ಲಿನ ವಿಶೇಷತೆಯಾಗಿದೆ. ಬಾಕಿಮಾರು ಗದ್ದೆಯಲ್ಲಿ ಬ್ರಹ್ಮ ಬೈದರ್ಕಳರ ಕಡಸಾಲೆ ಸೇವೆ, ಕೋಟಿ-ಚೆನ್ನಯರ ಸುರ್ಯ ಸೇವೆ ಬಳಿಕ ಗರಡಿಯಲ್ಲಿ ಮುಂಜಾನೆ ಮಾಯಂದಾತಿ ದೇವಿ ಉತ್ಸವ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಹೈಕೋರ್ಟ್  ನ್ಯಾಯಾಧೀಶ ಶ್ರೀನಿವಾಸ ಬಿಜೂರು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

By Suddi9

Leave a Reply

Your email address will not be published. Required fields are marked *