ಬಂಟ್ವಾಳ: ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಪುಳ ಕೋಡಿ ಅರೆಬೆಟ್ಟು ಕಾಂಕ್ರೀಟೀಕರಣ ರಸ್ತೆಯ ಉದ್ಘಾಟನೆ, ಅರೆಬೆಟ್ಟಿನಿಂದ ಬಾಯಿಲ ದವರೆಗಿನ ರಸ್ತೆ ಡಾಮರೀಕರಣಕ್ಕೆ ಶಿಲಾನ್ಯಾಸ ಮತ್ತು ಬಾಯಿಲ ಪರಿಶಿಷ್ಟ ವರ್ಗಗಳ ಕಾಲನಿಗೆ ರಸ್ತೆ ಕಾಂಕ್ರೀಟೀಕರಣಕ್ಕೆ ಶಂಕು ಸ್ಥಾಪನೆಯನ್ನು ಅರಣ್ಯ ಮತ್ತು ಪರಿಸರ ಜೀವ ಶಾಸ್ತ್ರಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ರಮಾನಾಥ ರೈ ಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಎಂ.ಎಸ್. ಮಹಮ್ಮದ್, ತಾ.ಪಂ ಸದಸ್ಯರಾದ ಮಾಧವ ಮಾವೆ, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ, ಉಪಾಧ್ಯಕ್ಷರಾದ ನಿಶಾಂತ್ ರೈ, ಪಾಣೆಮಂಗಳೂರು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಅಬ್ಬಾಸ್ ಅಲಿ ವೀರಕಂಭ ಗ್ರಾಮ ಪಂಚಾಯತ್ ನ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.
